ಉ.ಕ ಜಿಲ್ಲಾ ಶಿಕ್ಷಕರ ಸಹಕಾರಿ ಸಂಘದ ನಿರ್ದೇಶಕರಾಗಿ ಸತೀಶ್ ನಾಯಕ ಅವಿರೋಧ ಆಯ್ಕೆ

ಹಳಿಯಾಳ : ಉತ್ತರ ಕನ್ನಡ ಜಿಲ್ಲಾ ಶಿಕ್ಷಕರ ಸಹಕಾರಿ ಸಂಘದ ನಿರ್ದೇಶಕರಾಗಿ ಹಳಿಯಾಳ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಸತೀಶ ನಾಯಕ ಬಾವಿಕೇರಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಹಳಿಯಾಳ ತಾಲ್ಲೂಕಿನ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಸತೀಶ್ ನಾಯಕ ಬಾವಿಕೇರಿಯವರು ಸೇವೆ ಸಲ್ಲಿಸುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅಂಕೋಲಾ ಶಿಕ್ಷಕರ ಸೊಸೈಟಿಗೆ ಆಯ್ಕೆಯಾದ ಸತೀಶ ನಾಯಕ ಬಾವಿಕೇರಿಯವರನ್ನು ತಾಲ್ಲೂಕಿನ ಗಣ್ಯರನೇಕರು ಅಭಿನಂದಿಸಿದ್ದಾರೆ.