ಹಳಿಯಾಳ ಕೆನರಾ ಬ್ಯಾಂಕಿನಲ್ಲಿ ವಿದ್ಯುತ್ ವ್ಯತ್ಯಯ : ಪರದಾಡಿದ ಗ್ರಾಹಕರು

ಹಳಿಯಾಳ : ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಗ್ರಾಹಕರು ಪರದಾಡಿದ ಘಟನೆ ಇಂದು ಮಂಗಳವಾರ ನಡೆದಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಟ್ಟಣದ ಕೆನರಾ ಬ್ಯಾಂಕ್ ಹೊಂದಿದ್ದು, ಇಂದು ವಿದ್ಯುತ್ ಸಮಸ್ಯೆಯಾದ ಹಿನ್ನಲೆಯಲ್ಲಿ ಹಾಗೂ ಜನರೇಟ್ ಸಹ ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಗ್ರಾಹಕರು ಬರಿಗೈಯಲ್ಲಿ ವಾಪಾಸ್ಸು ಹೋದ ಘಟನೆ ನಡೆದಿದೆ. ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಮರ ಗಿಡಗಳು ಧರೆಗುರುಳಿದ್ದು ವಿದ್ಯುತ್ ವ್ಯತ್ಯಯ ಸರ್ವೆ ಸಾಮಾನ್ಯ ಎಂಬಂತಾಗಿದೆ.