ದೇವನಹಳ್ಳಿ, ಜುಲೈ 26: ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಬಳಿ ಆ್ಯಂಬುಲೆನ್ಸ್ನಲ್ಲಿ ಮಗುವಿಗೆ ಮಹಿಳೆ ಜನ್ಮ ನೀಡಿದ್ದಾರೆ. ಗೌರಿಬಿದನೂರು ತಾಲೂಕಿನ ಚಿಕ್ಕಹೊಸಹಳ್ಳಿ ಗ್ರಾಮದ ರೂಪ ಅವರಿಗೆ ಇಂದು ಬೆಳಗ್ಗೆ 04:30 ರ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಕುಟುಂಬಸ್ಥರು ಆ್ಯಂಬುಲೆನ್ಸ್ ಮೂಲಕ ಆಸ್ವತ್ರೆಗೆ ದೊಡ್ಡಬಳ್ಳಾಪುರಕ್ಕೆ ಕರೆತರುತ್ತಿದ್ದರು. ಈ ವೇಳೆ ಆ್ಯಂಬುಲೆನ್ಸ್ನಲ್ಲಿಯೇ ಹೆರಿಗೆ ಆಗಿದೆ. ಮಹಿಳೆಗೆ ನೋವು ಹೆಚ್ಚಾಗುತ್ತಿದ್ದಂತೆಯೇ ರಸ್ತೆ ಬದಿಯಲ್ಲಿ ಆ್ಯಂಬುಲೆನ್ಸ್ ನಿಲ್ಲಿಸಿ ಸಿಬ್ಬಂದಿ ಹೇಮಾವತಿ ಎಂಬುವವರು ಹೆರಿಗೆ ಮಾಡಿಸಿದ್ದಾರೆ. ನಂತರ ಆಸ್ವತ್ರೆಗೆ ಕರೆತಂದು ತಾಯಿ ಮಗುವಿನ ಹಾರೈಕೆ ಮಾಡಲಾಗಿದೆ. ಸುರಕ್ಷಿತ ಹೆರಿಗೆ ಮಾಡಿಸಿದ ಸಿಬ್ಬಂದಿ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.