ಅಂಕೋಲಾ: ನೆರೆ ಭೀತಿ ಎದುರಾದಲ್ಲಿ ಅದನ್ನು ಎದುರಿಸಲು ತಾಲೂಕು ಆಡಳಿತ ಸರ್ವಸನ್ನದ್ದವಾಗಿದೆ. ಇದುವರೆಗೆ ತಾಲೂಕಿನಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದಿಲ್ಲ. ಅಗತ್ಯ ಬಿದ್ದಲ್ಲಿ ಶೀಘ್ರವಾಗಿ ಜನರಿಗೆ ತೊಂದರೆಯಾಗದಂತೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಹಶೀಲ್ದಾರ್ ಪ್ರವೀಣ ಹುಚ್ಚಣ್ಣವರ್ ತಿಳಿಸಿದ್ದಾರೆ…
ಈಗಾಗಲೇ 30ಕ್ಕೂ ಅಧಿಕ ಕಾಳಜಿ ಕೇಂದ್ರಗಳನ್ನು ನಿಗದಿಪಡಿಸಿದ್ದು ಅವಶ್ಯಕತೆ ಬಿದ್ದಲ್ಲಿ ತಕ್ಷಣವೇ ಅವುಗಳನ್ನು ತೆರೆಯಲಾಗುವುದು. ತಾಲೂಕು ಮಟ್ಟದ ನೋಡಲ್ ಅಧಿಕಾರಿಗಳು ತಮ್ಮ ತಂಡದೊಂದಿಗೆ ನಿಗದಿಪಡಿಸಿದ ಗ್ರಾಮ ಪಂಚಾಯಿತಿಗಳಿಗೆ ಮತ್ತು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕಾರ್ಯ ಪ್ರವೃತ್ತರಾಗಿದ್ದಾರೆ.
ತಾಲೂಕಿನಲ್ಲಿ ಇದುವರೆಗೆ ಹೆಚ್ಚಿನ ಪ್ರಮಾಣದ ಅಹಿತಕರ ಘಟನೆಗಳು ಜರುಗಿಲ್ಲ. ಆದಾಗಿಯೂ ಗಂಗಾವಳಿ ನದಿ ನೀರಿನ ಪ್ರಮಾಣ ಹೆಚ್ಚುವ ಸಂಭವವಿದ್ದು ತಾಲೂಕಿನಲ್ಲೆಡೆಯ ಮಾಹಿತಿಯನ್ನು ನಿರಂತರವಾಗಿ ಪಡೆಯಲಾಗುತ್ತಿದೆ.
ಮುಂದಿನ 24 ಗಂಟೆಗಳಲ್ಲಿ ಬಾರಿ ಗಾಳಿ ಮಳೆ ಸಂಭವಿಸುವ ಸಾಧ್ಯತೆ ಇರುವುದರಿಂದ ಒಂದರಿಂದ ಹತ್ತನೇ ತರಗತಿ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ…