ಇಂಡಿಯಾ ಬುಕ್ ಆಫ್ ರೆಕಾರ್ಡ್, ಕಲಾಂ ವರ್ಡ್ ರೆಕಾರ್ಡ್ ಮಾಡಿದ 2ನೇ ತರಗತಿ ಬಾಲಕ; ಯಾಕೆ ಗೊತ್ತಾ?

ಚಿತ್ರದುರ್ಗ, ಜು.23: ರಾಮಾಯಣ, ಮಹಾಭಾರತದ ಕುರಿತ ಪ್ರಶ್ನೋತ್ತರಗಳಿಗೂ ಸೈ. ಸಾಮಾನ್ಯಜ್ಞಾನದ ಪ್ರಶ್ನೋತ್ತರಗಳಿಗೂ ಜೈ. ಯಾವುದೇ ಪ್ರಶ್ನೆ ಕೇಳಿದ್ರೂ ಉತ್ತರಿಸುವ ಫಟಾಫಟ್ ಉತ್ತರಿಸುವ ಬಾಲಕ ಹೌದು, ಚಿತ್ರದುರ್ಗ ನಗರದ ಜೋಗಿಮಟ್ಟಿ ಬಡಾವಣೆಯ ನಿವಾಸಿ ಶೃತಿ, ವಿಜಯಕುಮಾರ್ ದಂಪತಿಯ ಪುತ್ರ ಹೇಮಂತ್ ಚಿಕ್ಕ ಎಂಬ ಬಾಲಕ. ಚಿಕ್ಕವಯಸ್ಸಿನಲ್ಲೇ ತನ್ನ ಜಾಣ್ಮೆ ಮೂಲಕ ಗಮನಸೆಳೆಯುತ್ತಿದ್ದಾನೆ. ಒಂದು ಸಲ ಹೇಳಿದ್ರೆ, ಸಾಕು ಹೇಮಂತ್ ತನ್ನ ಸ್ಮೃತಿ ಪಟಲದಲ್ಲಿ ಮರೆಯದೇ ಸೇವ್ ಮಾಡಿಕೊಂಡು ಬಿಡುತ್ತಾನೆ. ಈಗ ರಾಮಾಯಣ, ಮಹಾಭಾರತಕ್ಕೆ ಸಂಬಂಧಿಸಿದ 1ಸಾವಿರ ಪ್ರಶ್ನೆ ಜೊತೆಗೆ ಸಾಮಾನ್ಯಜ್ಞಾನಕ್ಕೆ ಸಂಬಂಧಿಸಿದ 1ಸಾವಿರ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ. ಹೀಗಾಗಿ, ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಕಲಾಂ ವರ್ಡ್ ರೆಕಾರ್ಡ್ ದಾಖಲಿಸಿದ್ದಾನೆಂದು ಹೇಮಂತ್ ತಾಯಿ ಶೃತಿಯವರು ಹೇಳುತ್ತಾರೆ.

ಇನ್ನು ಈ ಟ್ಯಾಲೆಂಟೆಡ್ ಬಾಯ್ ಹೇಮಂತ್ ಸದ್ಯ ಎರಡನೇ ತರಗತಿ ಓದುತ್ತಿದ್ದಾನೆ. ಆದ್ರೆ, ವಯಸ್ಸಿಗೆ ಮೀರಿದ ಬುದ್ಧಿವಂತಿಕೆ, ಮೆಮೊರಿ ಪವರ್ ಹೊಂದಿದ್ದಾನೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ಪ್ರತಿ ಪಾತ್ರಗಳ ಹೆಸರನ್ನೂ ಹೇಳುತ್ತಾನಲ್ಲದೆ, ಪ್ರತಿ ಪ್ರಶ್ನೋತ್ತರಗಳಿಗೂ ಫಟಾಫಟ್ ಉತ್ತರ ನೀಡುತ್ತಾನೆ. ವಿವಿಧ ದೇಶ, ರಾಜಧಾನಿಗಳ ಹೆಸರು, ಗಾದೆಗಳು, ದೇಶದ ರಾಜಧಾನಿಗಳು, ಕರ್ನಾಟಕದ ಜಿಲ್ಲೆಗಳ ಹೆಸರು, ವಿಜ್ಞಾನಿಗಳು ಮತ್ತು ಸಂಶೋಧನೆಗಳು, ನದಿಗಳು, ಸಂವತ್ಸರಗಳು ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಉತ್ತರಿಸುತ್ತಾನೆ.

ಇನ್ನು ಈ ಬಾಲಕ ಇಂಡಿಯನ್ ಆರ್ಮಿಗೆ ಸೇರಿ ಸೇವೆ ಸಲ್ಲಿಸುವ ಕನಸು ಹೊಂದಿದ್ದಾನೆ. ಮಗನ ಜಾಣ್ಮೆ, ಸಾಧನೆ ಕಂಡು ಪೋಷಕರು ದಿಲ್​ ಖುಷ್ ಆಗಿದ್ದಾರೆ. ಅಂತೆಯೇ ಮಗ ತನ್ನ ಕನಸಿನಂತೆ ಮುನ್ನಡೆದು ಸಾಧಿಸಲಿ ಎಂಬ ಆಶಯ ಹೊಂದಿದ್ದಾರೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದ ಜೋಗಿಮಟ್ಟಿ ಬಡಾವಣೆಯ ನಿವಾಸಿ ಶೃತಿ ಮತ್ತು ವಿಜಯಕುಮಾರ್ ದಂಪತಿಯ ಪುತ್ರ ಹೇಮಂತ್ ವಿಶೇಷ ಟ್ಯಾಲೆಂಟ್ ಮೂಲಕ ಗಮನ ಸೆಳೆದಿದ್ದಾನೆ. ವಯಸ್ಸಿಗೆ ಮೀರಿದ ಪ್ರತಿಭೆ ಪ್ರದರ್ಶಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ಕಲಾಂ ವರ್ಲ್ಡ್ ರೆಕಾರ್ಡ್ ಸೇರಿದ್ದು, ಹೆತ್ತವರಿಗೆ ಮಾತ್ರವಲ್ಲದೆ ದುರ್ಗಕ್ಕೆ ಕೀರ್ತಿ ತಂದಿದ್ದಾನೆ.