ಸಿದ್ದಾಪುರ: ನಾರ್ಥ್ ಕೆನರಾ ಮುಸ್ಲಿಮ್ ಯುನೈಟೆಡ್ ಪೋರಂನ ತಾಲೂಕಾಧ್ಯಕ್ಷ ಜೆಡಿಎಸ್ ಪಕ್ಷದ ತಾಲೂಕಾ ಉಪಾಧ್ಯಕ್ಷ ಹಾಗೂ ಸ್ಥಳೀಯ ಬದ್ರಿಯಾ ಜಾಮೀಯಾ ಮಸೀದಿಯ ಆಡಳಿತ ಮಂಡಳಿ ಸದಸ್ಯರಾಗಿದ್ದ ಜನಾನುರಾಗಿ ಆಲಂ ಮೆಹಮೂದ್ ಖಾನ್ (೬೫) ನಿನ್ನೆ ಶಿವಮೊಗ್ಗ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಕೆಲ ತಿಂಗಳುಗಳಿAದ ಕಿಡ್ಮಿ ಸಮಸ್ಯೆಯಿಂದ ಬಳಲುತ್ತಿದ್ದರು ಮೃತರು ಪತ್ನಿ ಎರಡು ಗಂಡು ಮಕ್ಕಳು, ಎರಡು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನದ ಸುದ್ದಿ ತಿಳಿದು ಆಘಾತಗೊಂಡು ಶೋಕ ಸಂತಾಪವನ್ನು ವ್ಯಕ್ತಪಡಿಸಿರುವ ಜೆಡಿಎಸ್ ಮುಖಂಡರಾದ ಇಲಿಯಾಸ ಇಬ್ರಾಹಿಂ ಸಾಬ, ಬಿ.ಎ.ಸಾಬ ಪೋರಂ ಕಾರ್ಯದರ್ಶಿ ಟಿ.ಕೆ.ಎಂ.ಆಜಾದ್, ನೂರುಲ್ ಅಮೀನ್ ಹಾರ್ಸಿಕಟ್ಟಾ ಅಶ್ರಭರಿತ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿ ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ ಅಲ್ಲದೆ ಮೃತ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿ ದಯಪಾಲಿಸಲೆಂದು ಪ್ರಾರ್ಥಿಸಿದ್ದಾರೆ. ಸ್ನೇಹಿತರು, ನೆಂಟರಿಷ್ಟರು ಮೈತರ ಅಂತಿಮ ದರ್ಶನ ಪಡೆದರು. ಶವ ಸಂಸ್ಕಾರದಲ್ಲಿ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷರು, ಸದಸ್ಯರು ಅಪಾರ ಸಂಖ್ಯೆಯ ಮುಸ್ಲಿಮ್ ಬಾಂಧವರು ಪಾಲ್ಗೊಂಡಿದ್ದರು.