ಯಲ್ಲಾಪುರದಲ್ಲಿ ಗಮನ ಸೆಳೆದ ಚಂದ್ರಾವತಿ ವಿಲಾಸ ಹಾಗೂ ವೀರ ಅಭಿಮನ್ಯು ಯಕ್ಷಗಾನ ಪ್ರಸಂಗ

ಯಲ್ಲಾಪುರ :- ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಸಂಜೆ ಮೈತ್ರಿ ಕಲಾ ಬಳಗದವರು ಚಿನ್ನಾಪುರದ ಚಿನ್ನೇಶ್ವರ ದೇವಸ್ಥಾನದ ಕಟ್ಟಡ ಸಹಾಯಾರ್ಥ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಟ್ಟಿಯಂಗಡಿ ಯವರು ಚಂದ್ರಾವತಿ ವಿಲಾಸ ಹಾಗೂ ವೀರ ಅಭಿಮನ್ಯು ಪ್ರಸಂಗದ ಯಕ್ಷಗಾನ ಬಯಲಾಟವನ್ನು ಆಡಿದರು.
ಯಕ್ಷಗಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ವೋದಯ ಶಿಕ್ಷಣ ಸಮಿತಿಯ ಅಧ್ಯಕ್ಷ ಡಿ. ಶಂಕರ ಭಟ್ಟ ಮಾತನಾಡಿ ಕಲೆ ಮತ್ತು ಕಲಾವಿದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಜೀವಂತವಾಗಿರಬೇಕಾದರೆ ಪ್ರೇಕ್ಷಕರ ಕಲೆಯ ಪ್ರೋತ್ಸಾಹ ಬಹಳ ಮುಖ್ಯ. ನಮ್ಮ ಪರಂಪರೆಯಿಂದ ಕಾಪಾಡಿಕೊಂಡು ಬಂದ ಯಕ್ಷಗಾನವನ್ನು ಉಳಿಸಬೆಕು. ಸಾಂಸ್ಕೃತಿಕ ಕ್ಷೇತ್ರವು ಸಮೃದ್ಧವಾಗಿದ್ದರೆ ಮಾತ್ರ ನೆಮ್ಮದಿ ಇರಲು ಸಾಧ್ಯ. ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ ಎಮ್ ಎಸ್ ನ ನಿರ್ದೇಶಕ ಟಿ ಎನ್ ಭಟ್ಟ ನಡಿಗೆ ಮನೆ ಹೇಳಿದರು.
ಮೈತ್ರಿ ಕಲಾ ಬಳಗದ ಅಧ್ಯಕ್ಷ ಜಿ ಎಸ್ ಗಾಂವ್ಕರ ಸ್ವಾಗತಿಸಿದರು.ಕಾರ್ಯದರ್ಶಿ ಮಂಜುನಾಥ ಮೂಲೆ ಮನೆ ನಿರೂಪಿಸಿದರು. ಹಟ್ಟಿಯಂಗಡಿ ಮೇಳದ ವ್ಯವಸ್ಥಾಪಕ ರಂಜಿತ್ ಶೆಟ್ಟಿ ವಂದಿಸಿದರು.
ನಂತರ ನಡೆದ ಚಂದ್ರಾವತಿ ವಿಲಾಸ ಯಕ್ಷಗಾನ ಪ್ರಸಂಗದಲ್ಲಿ ಕೃಷ್ಣ ನಾಗಿ ಶಿಥಿಲ್ ಶೆಟ್ಟಿ ಐರಬೈಲ್,ಉಮೇಶ್ ಶಂಕರನಾರಾಯಣ ಚಂದ್ರಾವಳಿಯಾಗಿ, ಗಣೇಶ ಬಿಜಾಡಿ ರಾಧೆ, ಚಂದಗೋಪನಾಗಿ ದ್ವಿತೇಶ ಕಾಮತ್ ಕುಂದಾಪುರ ಹಾಗೂ ಅಜ್ಜಿಯ ಪಾತ್ರದಲ್ಲಿ ಯಕ್ಷಗಾನ ದ ಹಿರಿಯ ಹಾಸ್ಯ ಪಾತ್ರಧಾರಿ ಹಳ್ಳಾಡಿ ಜೈರಾಂ ಶೆಟ್ಟಿ ಭಾವಪೂರ್ಣ ವಾಗಿ ಅಭಿನಯಿಸಿದರು. ವೀರ ಅಭಿಮನ್ಯು ಪ್ರಸಂಗದಲ್ಲಿ ಕೌರವನಾಗಿ ರಾಜೇಶ್ ಬೈಕಾಡಿ,ದ್ರೋಣನಾಗಿ ಶ್ರೀಧರ ಕಾಂಚನ್, ಸುಭದ್ರೆಯಾಗಿ ಮಂಜು ಕಮಲ ಶಿಲೆ, ವೀರ ಅಭಿಮನ್ಯು ವಾಗಿ ಯುವರಾಜ್ ನಾಯ್ಕ ಅಭಿನಯಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ಕಂಚಿನ ಕಂಠದ ರವೀಂದ್ರ ಶೆಟ್ಟಿ ಹೊಸಂಗಡಿ, ಸುಧೀರ್ ಭಟ್ಟ, ಸುಶ್ರಾವ್ಯವಾಗಿ ಪ್ರಸಂಗದ ಪದ್ಯ ಹಾಡಿದರು. ಮದ್ದಳೆಯಲ್ಲಿ ಎನ್ ಜಿ ಹೆಗಡೆ ಯಲ್ಲಾಪುರ,ಚಂಡೆಯಲ್ಲಿ ಮಂಜುನಾಥ ನಾವುಡ, ಪ್ರಸನ್ನ ಡಬ್ಗುಳಿ ಸಹಕರಿಸಿದರು.