ದಾಂಡೇಲಿ : ಅಕ್ರಮವಾಗಿ ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನುಬಂಧಿಸಿದ ಘಟನೆ ದಾಂಡೇಲಿ ನಗರದ ಹಳೆದಾಂಡೇಲಿಯ ಜ್ಯೂನಿಯರ್ ಕಾಲೇಜಿನ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ನಡೆದಿದೆ.
ದಾಂಡೇಲಿಯ ನಿರ್ಮಲನಗರದ ನಿವಾಸಿಗಳಾದ ಯೋಗೇಶ್ ಕುಮಾರ್ ರಜಪೂತ್ ಮತ್ತು ಶಂಕರ್ ಅರ್ಕಸಾಲಿ ಎಂಬವರೇ ಗಾಂಜಾ ಮಾರಾಟ ಮಾಡಲೆತ್ನಿಸಿ ಸಿಕ್ಕಿಬಿದ್ದ ಆರೋಪಿಗಳಾಗಿದ್ದಾರೆ. ಇವರು ಹಳೆದಾಂಡೇಲಿಯ ಜ್ಯೂನಿಯರ್ ಕಾಲೇಜು ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ಸಂದರ್ಭದಲ್ಲಿ ಖಚಿತ ಮಾಹಿಯಡಿ ನಗರ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ್ ಅವರ ನೇತೃತ್ವದ ಪೊಲೀಸರ ತಂಡ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಲ್ಲಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಬಟ್ಟೆ ಸಮೇತ 259 ಗ್ರಾಂ ಗಾಂಜಾ ಇದರ ಬೆಲೆ ರೂ: 10,000/ ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಆರೋಪಿಗಳಲ್ಲಿದ್ದ ನಗದು ರೂ:410/-, ಹೊಂಡಾ ಡಿಯೋ ಕಂಪೆನಿಯ ಸ್ಕೂಟಿಯವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಕಲಂ: 8(ಎ), 20(ಬಿ) (11) (ಎ),ಎನ್.ಡಿ.ಪಿ.ಎಸ್ ಕಾಯ್ದೆ 1985 ರಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ಕ್ರಮವನ್ನು ಕೈಗೊಳ್ಳಲಾಗಿದೆ.