ಯಲ್ಲಾಪುರ: ಕೊಚ್ಚಿಕೊಂಡು ಹೋದ ಎರಡು ಎಮ್ಮೆಗಳು

ಯಲ್ಲಾಪುರ: ಮೇಯಲು ಹೋದ ಎರಡು ಎಮ್ಮೆಗಳು ಕೊಚ್ಚಿಕೊಂಡು ಹೋದ ಘಟನೆ ತಾಲೂಕಿನ ಕಿರವತ್ತಿ ಗ್ರಾ.ಪಂ ವ್ಯಾಪ್ತಿಯ ಕಂಚನಳ್ಳಿಯ ಚಿಮಣಿಮಾಳದಲ್ಲಿ ನಡೆದಿದೆ.
ಚಿಮಣಿಮಾಳದ ವಿಠ್ಠು ಭಾಗು ಜಂಗ್ಲೆ ಅವರಿಗೆ ಸೇರಿದ ಎರಡು ಎಮ್ಮೆಗಳು ಮೇಯಲು ಹೋದ ಸಂದರ್ಭದಲ್ಲಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿವೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.