ದಾಂಡೇಲಿ : ನಗರದ ಪಟೇಲ್ ವೃತ್ತದ ಹತ್ತಿರವಿರುವ ಇಂದಿರಾ ಕ್ಯಾಂಟೀನ್ ಸೋರುತ್ತಿದ್ದು, ಗ್ರಾಹಕರು ಉಪಹಾರ ಸೇವಿಸಲು ಮತ್ತು ಊಟ ಮಾಡಲು ಸಂಕಷ್ಟ ಎದುರಾಗಿದೆ. ಕಳೆದ ಆರೇಳು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಇಂದಿರಾ ಕ್ಯಾಂಟೀನ್ ಅತ್ಯಲ್ಪ ವರ್ಷದಲ್ಲೆ ಸೋರುತ್ತಿರಲು ಕಾರಣಗಳೇನು ಎನ್ನುವುದನ್ನು ಇಂದಿರಾ ಕ್ಯಾಂಟೀನಿನ ಮೇಲ್ಚಾವಣಿಯೆ ಸಾರಿ ಹೇಳುವಂತಿದೆ. ಇನ್ನೂ ಸೋರಿದ ಮಳೆ ನೀರು ವಿದ್ಯುತ್ ಮೀಟರ್ ಮೇಲೆ ಬಿದ್ದು ಅಪಾಯವನ್ನು ಅಹ್ವಾನಿಸುವಂತಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೆ ಕ್ರಮವನ್ನು ಕೈಗೊಳ್ಳಬೇಕಾಗಿದೆ.