ಬೆಂಗಳೂರು: ಅವಧಿ ಮೀರಿದ ದಿನ ಬಳಕೆ ವಸ್ತುಗಳ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಸಿಸಿಬಿ ಪೊಲೀಸ್ ರು ಬಂಧಿಸಿದ್ದಾರೆ. ಡಿಜೆ ಹಳ್ಳಿಯ ಶ್ಯಾಂಪುರ ಮುಖ್ಯರಸ್ತೆಯಲ್ಲಿ ಅಂಗಡಿ ಇಟ್ಟಿದ್ದ ಸಿದ್ದಿಕ್ ಅಹಮದ್ ಪಾಷಾ ಬಂಧನಕ್ಕೊಳಗಾದ ಆರೋಪಿ. ಬಂಧಿತನಿಂದ 50 ಲಕ್ಷ ಬೆಲೆಬಾಳುವ ಅವಧಿ ಮೀರಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇತ ತನ್ನ ಅಂಗಡಿಯಲ್ಲಿ ಅವಧಿ ಮೀರಿದ ಆಹಾರ ಮತ್ತು ಮಕ್ಕಳ ಪದಾರ್ಥಗಳನ್ನ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಕುರಿತು ಖಚಿತ ಮಾಹಿತಿ ತಿಳಿದು ಸಿಸಿಬಿ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿದ್ದರು.