ಬೆಂಗಳೂರು: ಬೀದಿ ನಾಯಿಗಳ ಹಾವಳಿ ಹೆಚ್ಚಾದ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಶುಪಾಲನಾ ವಿಭಾಗದಿಂದ ಡ್ರೋನ್ ಮೂಲಕ ಬೀದಿ ನಾಯಿಗಳ ಸರ್ವೇ ಮಾಡಲಾಗುತ್ತಿದೆ. ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ, ರೇಬೀಸ್ ರೋಗ ತಡೆಗಟ್ಟಲು, ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಬಿಬಿಎಂಪಿ WVS ಸರ್ವೆ 2023 ಮೊಬೈಲ್ ಆ್ಯಪ್ ಮೂಲಕ ಬೀದಿ ನಾಯಿ ಸಮೀಕ್ಷೆ ಆರಂಭಿಸಿದೆ.
ಈ ಮೊಬೈಲ್ ಆ್ಯಪ್‌ನಲ್ಲಿ ಬೀದಿ ನಾಯಿಗಳ ಫೋಟೋ ತಗೆದು ಫೋಟೋ ಅಪ್ಲೋಡ್ ಮಾಡಲಾಗುತ್ತಿದೆ. ಸಂತಾನಹರಣ ಚಿಕಿತ್ಸೆ ಆದ, ಆಗದೇ ಇರುವ ಬಗ್ಗೆ ಮಾಹಿತಿ ಕೂಡ ಅಪ್ಲೋಡ್ ಮಾಡಲಾಗುತ್ತಿದೆ. ಈ ಮೂಲಕ ನಾಯಿಗಳ ಮೇಲೆ ನಿಗಾ ಇಡಲಾಗುತ್ತಿದೆ. ಇದೀಗ ಡ್ರೋನ್ ಮೂಲಕ ಬೀದಿ ನಾಯಿಗಳ ಸರ್ವೇ ಆರಂಭವಾಗಿದೆ. ಕೆರೆ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಬೀದಿನಾಯಿಗಳ ಸಮೀಕ್ಷೆ ಮಾಡಲಾಗುತ್ತಿದೆ. ಸಂತಾನ ಹರಣ ಚಿಕಿತ್ಸೆ ಆಗದೇ ಇದ್ದರೆ, ಸಮೀಕ್ಷೆ ಮೂಲಕ ಮುಂದಿನ ದಿನಗಳಲ್ಲಿ ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತೆ.
2019 ನೇ ಸಾಲಿನಲ್ಲಿ ಬಿಬಿಎಂಪಿಯಿಂದ ನಡೆದ ಸಮೀಕ್ಷೆಯಲ್ಲಿ ಸುಮಾರು 3.10 ಲಕ್ಷ ಬೀದಿ ನಾಯಿಗಳಿದ್ದವು. 2019 ರಲ್ಲಿ ಸಮೀಕ್ಷೆ ಮಾಡಿ ಸಂತಾನಹರಣ ಚಿಕಿತ್ಸೆ ಕೊಡಲಾಗಿತ್ತು. ಈ ಕಾರ್ಯಕ್ರಮ ಯಶಸ್ವಿ ಅನುಷ್ಟಾನದ ಬಗ್ಗೆ ತಿಳಿಯುವ ಸಲುವಾಗಿ ಈಗ 2023ನೇ ಸಾಲಿನಲ್ಲಿ ಬೀದಿನಾಯಿಗಳ ಸಮೀಕ್ಷೆಯ ಕಾರ್ಯ ನಡೆಯುತ್ತಿದೆ. ಒಂದು ಕಡೆ ಬೀದಿ ನಾಯಿಗಳ ಕಾಟ ಹೆಚ್ಚಾದರೆ ಇನ್ನೊಂದೆಡೆ ಬೀದಿ ನಾಯಿಗಳ ಸರ್ವೇ ನಡೆಯುತ್ತಿದೆ. ಬೆಂಗಳೂರಿನ ಮತ್ತಿಕೆರೆಯ ಜಯಪ್ರಕಾಶ್ ಪಾರ್ಕ್ ನಲ್ಲಿ ನಿತ್ಯ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಬೀದಿ ನಾಯಿಗಳಿಂದ ತೊಂದರೆಯಾಗುತ್ತಿದ್ದು ಬೀದಿ ನಾಯಿಗಳನ್ನ ಬೇರೆಡೆಗೆ ಸ್ಥಳಾಂತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೈಕ್ ಮೂಲಕ ಸುತ್ತಾಡಿ ಸರ್ವೆ
ನಗರದಲ್ಲಿ ಎಷ್ಟು ಬೀದಿ ನಾಯಿಗಳಿವೆ ಎಂಬ ಸರಿಯಾದ ಮಾಹಿತಿ ಪಾಲಿಕೆ ಬಳಿ ಇಲ್ಲ. ಹೀಗಾಗಿ ಬೀದಿ ನಾಯಿಗಳ ಗಣತಿಗೆ ಪಾಲಿಕೆ ಮುಂದಾಗಿದೆ. ಈಗಾಗಲೇ ಬಿಬಿಎಂಪಿ ಮತ್ತು ರಾಜ್ಯ ಪಶುಸಂಗೋಪನ ಇಲಾಖೆ ಸಿಬ್ಬಂದಿಗೆ ತರಬೇತಿ ನೀಡಿದ್ದು ಡ್ರೋನ್ ತಂತ್ರಜ್ಞಾನದ ಮೂಲಕ ನಾಯಿಗಳ ಗಣತಿ ಮಾಡಲಾಗುತ್ತಿದೆ. 50 ತಂಡಗಳನ್ನು ಸಿದ್ದಪಡಿಸಿರುವ ಇಲಾಖೆ ಪ್ರತಿ ತಂಡದಲ್ಲಿ ಸದಸ್ಯರಿದ್ದಾರೆ. ಒಬ್ಬರು ವಾಹನ ಚಲಾಯಿಸಿದ್ರೆ ಮತ್ತೊಬ್ಬರು ನಾಯಿಯ ಚಿತ್ರ ತೆಗೆದು ಡೇಟಾ ಅಪ್ಲೋಡ್ ಮಾಡ್ತಾರೆ. ಜಿಯೋಟ್ಯಾಗ್ ಚಿತ್ರಣವನ್ನ ಅಪ್ಲಿಕೇಶನ್ ಅಲ್ಲಿ ಅಪ್ಲೋಡ್ ಮಾಡಲಾಗುತ್ತೆ. ಪ್ರತಿ ತಂಡವು ದಿನಕ್ಕೆ 5 ಕಿ ಮೀ ರಸ್ತೆ ಕ್ರಮಿಸುತ್ತೆ. ಬೆಳಿಗ್ಗೆ ಆರರಿಂದ 10 ರ ವರೆಗೆ ಗಣತಿ ನಡೆಯಲ್ಲಿದ್ದು ಯಾವ ತಂಡ ಎಲ್ಲಿ ಹೋಗಬೇಕೆಂದು ಈಗಾಗಲೇ ಮ್ಯಾಪ್ ರೆಡಿ ಕೂಡಾ ಮಾಡಲಾಗಿದೆ. ಡೇಟಾ ಆಧಾರದ ಮೇಲೆ ಪಶುಸಂಗೋಪನ ಇಲಾಖೆ 100 ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಕೆ ಮಾಡಲಿದೆ. ಜುಲೈ 1ರಿಂದ ಬೀದಿ ನಾಯಿ ಗಣತಿ ನಡೆಸಲು ಬಿಬಿಎಂಪಿ ಸಜ್ಜಾಗಿದೆ. 15 ದಿನಗಳಲ್ಲಿ ಸಂಪೂರ್ಣ ಸರ್ವೆ ಮುಗಿಯುವ ಸಾಧ್ಯತೆ ಇದ್ದು ಡೇಟಾವನ್ನ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚಾರ್ ಗೆ ಕಲಿಸಲಾಗುತ್ತೆ.