ಯಲ್ಲಾಪುರ; ವಿಶ್ವಹಿಂದೂ ಪರಿಷತ್ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಚತುರ್ವೆದ ಸಂಹಿತಾಯಾಗ ಜು,೨೧ ರಿಂದ ೨೮ ರವರೆಗೆ ಅಯೋಧ್ಯೆಯಲ್ಲಿ ನಡೆಯಲಿದೆ.ಅದಕ್ಕೆ ಯಲ್ಲಾಪುರ,ಹೊನ್ನಾವರ, ಸುತ್ತಮುತ್ತಲಿನಿಂದ ಅಯೋಧ್ಯೆಗೆ ನಲವತ್ತು ವೈದಿಕರು ತೆರಳಲಿದ್ದಾರೆ ಎಂದು ವೇ.ಗೋಪಾಲಕೃಷ್ಣ ಭಟ್ ಹಂಡ್ರಮನೆ ಹೇಳಿದರು.
ಅವರು ಈಕುರಿತು ಮಂಗಳವಾರ ಮಾಹಿತಿನೀಡಿ,
ಋಗ್ವೇದ, ಯಜುರ್ವೇದ, ಸಾಮವೇದ, ಶುಕ್ಲ ಯಜುರ್ವೇದ ಸಂಹಿತಾಯಾಗ ನಡೆಯಲಿದೆ.ರಾಮಜನ್ಮಭೂಮಿಯಲ್ಲಿ ನಡೆಯುವ ಯಾಗದಲ್ಲಿ
ಋಗ್ವೇದ ಗುರುಪಾದ ಭಟ್,ಯಜುರ್ವೇದ ಚಿನ್ಮಯ ಜೋಷಿ,ಚನ್ನಕೇಶವ ಅವಧಾನಿ ನಿಟ್ಟೂರು,ಸಾಮವೇದ ವಿನಾಯಕ ಸಾಮಗ ಕವಲಕ್ಕಿ,ಗಜಾನನ ಭಟ್ಟ,ಶುಕ್ಲ ಯಜುರ್ವೇದ ಗಿರೀಶ ಭಟ್,ವಾಲ್ಮೀಕಿ ರಾಮಾಯಣ ವೆಂಕಟ್ರಮಣ ಭಟ್,ಭಾಗವತಕ್ಕೆ ಗಣಪತಿ ಭಟ್ ಕವಲಕ್ಕಿ
ಅವರ ನೇತೃತ್ವದಲ್ಲಿ ವೈದಿಕರು ಭಾಗವಹಿಸಲಿದ್ದಾರೆ.
ಪ್ರಮುಖರಾದ
ಪ್ರಶಾಂತ ಹೆಗಡೆ
ಟಿ.ಆರ್. ಹೆಗಡೆ ಇದ್ದರು.