ಯಲ್ಲಾಪುರ: ಪರಿಸರದ ಬಗೆಗೆ ಮಕ್ಕಳಿಗೆ ಬಾಲ್ಯದಲ್ಲೇ ಪ್ರೀತಿ ಆಸಕ್ತಿ ಬೆಳೆಯುವಂತೆ ಮಾಡಬೇಕು ಎಂದು ನಿವೃತ್ತ ವನಪಾಲಕ ನಾಗೇಶ್ ಬಿ.ನಾಯ್ಕ ಹೇಳಿದರು.
ಅವರು ಮಂಗಳವಾರ ಪಟ್ಟಣದ ಕಾಳಮ್ಮಾನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಗಿಡನೆಟ್ಟು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಸಿರಿದ್ದರೆ ಮಾತ್ರ ನಾವು ಉಳಿಯಲು ಸಾಧ್ಯ ಎಂದರು.
ನಿವೃತ್ತ ನೌಕರ ಸಂಘದ ಕಾರ್ಯದರ್ಶಿ ಸುರೇಶ ಬೋರಕರ್ ಮಾತನಾಡಿ,”ಹಸಿರಿನ ಬಗೆಗೆ ಕಳಕಳಿ,ಕಾಳಜಿ ಬೆಳೆಯಬೇಕು”ಎಂದರು.ಎಸ್.ಡಿ.ಎಂಸಿ ಅಧ್ಯಕ್ಷ ಸುರೇಶ ಟಿ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಾಧ್ಯಾಪಕಿ ಸುನಂದಾ ಪಾಠಣಕರ್, ಕವಿ ಸುಬ್ರಾಯ ಬಿದ್ರೆಮನೆ,ಪತ್ರಕರ್ತ ನಾಗೇಶಕುಮಾರ,
ಶಿಕ್ಷಕರಾದ ಪುಷ್ಪಾ,ವೀಣಾ ನಾಯ್ಕ,ಗಾಯತ್ರಿ ಭಟ್,ವಿಜಯಾ ನಾಯ್ಕ,ಭಾಗವಹಿಸಿದ್ದರು.