ಬೆಂಗಳೂರು: ಐಎಎಸ್ ಅಧಿಕಾರಿಯ ಪತ್ನಿ ತನ್ನ ಪತಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಮಡಿಕೇರಿ ಸಿಐಒ, ಐಎಎಸ್ ಅಧಿಕಾರಿ ಆಗಿರುವ ಆಕಾಶ್ ಶಂಕರ್ ವಿರುದ್ದ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇವರ ವಿರುದ್ಧ ಈ ಹಿಂದೆ ಪೂರ್ವ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಕೇಸ್ ಸಹ ದಾಖಲಾಗಿತ್ತು. ಸದ್ಯ ಈಗ ಮತ್ತೊಂದು ದೂರು ದಾಖಲಾಗಿದೆ.
ಆಕಾಶ್ ಶಂಕರ್ ಪತ್ನಿ ಡಾ ವಂದನ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆಕಾಶ್ ಶಂಕರ್ ಹಾಗು ಆತನ ಕುಟುಂಬದ ವಿರುದ್ದ ಮತ್ತೊಂದು ಕೇಸ್ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ. ನಾವು ಸುಳ್ಳು ಕೇಸ್ ಹಾಕಿಸಿದ್ದೇವೆ ಎಂದು ಅಪಪ್ರಚಾರ ಮಾಡಿದ್ದಾರೆ. ಗೂಗಲ್ನಲ್ಲಿ ಟ್ರಾಫಿಕಿಂಗ್ ಆಫ್ ಖಾಕೀಸ್ ಡಾಟರ್ ಮತ್ತು ಟ್ರಾಫಿಕರ್ ಆಫ್ ಡಾ ವಂದನ ಎಂದು ಮಾಡಿದ್ದಾರೆ. ವಾಟ್ಸ್ ಅಪ್ ನಲ್ಲಿ ನಮ್ಮ ವಿರುದ್ದ ಅವಹೇಳನಕಾರಿಯಾಗಿ ಪೋಸ್ಟ್ ಮತ್ರು ಸ್ಟೇಟಸ್ ಹಾಕಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಟಿ ಆರ್ ಸುರೇಶ್ ಪುತ್ರಿ, ಡಾ ವಂದನ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಐಎಎಸ್ ಅಧಿಕಾರಿ ಆಕಾಶ್ ಶಂಕರ್, ಸಹೋದರ ವಿಕಾಸ್ ಶಂಕರ್, ಪತ್ನಿ ಚೇತನಾ ವಿಕಾಸ್ ಮತ್ತು ಐಸಿರಿ ಶಿವಕುಮಾರ್ ಎಂಬುವವರ ಮೇಲೆ ಕೇಸ್ ದಾಖಲಾಗಿದೆ.
ಡಾ. ವಂದನಾ ಹಾಗೂ ಐಎಎಸ್ ಅಧಿಕಾರಿ ಆಕಾಶ್ 2022ರಲ್ಲಿ ಮದುವೆಯಾಗಿದ್ದು ಕೆಲ ತಿಂಗಳ ಹಿಂದಷ್ಟೇ ವಂದನಾ ಅವರು ಪತಿ ವಿರುದ್ಧ ಆರೋಪ ಮಾಡಿ ದೂರ ದಾಖಲಿಸಿದ್ದರು. ಚ್ಚು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಅದಕ್ಕೆ ಒಪ್ಪದಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ವಂದನಾ ಈ ಹಿಂದೆ ದೂರು ದಾಖಲಿಸಿದ್ದರು. ಆದ್ರೆ ಈಗ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದಾರೆ. ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.