Accident : ಈಕೆ ಇಷ್ಟೊಂದು ವೇಗದಲ್ಲಿ ಯಾಕೆ ನಡೆಯುತ್ತಿದ್ದಾಳೆ ಎಂದು ಯೋಚಿಸುತ್ತಿರುವಾಗಲೇ ಎದುರಿಗೆ ಬಂದ ಬಸ್ಸಿಗೆ ಈಕೆ ತಾನಾಗಿಯೇ ಹಾಯ್ದುಬಿಡುತ್ತಾಳೆ. ಈ ದೃಶ್ಯ ಯಾರ ಎದೆಯನ್ನೂ ನಡುಗಿಸುವಂತಿದೆ. ‘ತನ್ನ ಸಾವಿನಿಂದಾಗಿ ತನ್ನ ಕುಟುಂಬಕ್ಕೆ ಸರ್ಕಾರ ಹಣ ಸಹಾಯ ಮಾಡಬಹುದು, ಮಗನ ಕಾಲೇಜು ಶುಲ್ಕ ಪಾವತಿಸಲು ಅನುಕೂಲವಾಗಬಹುದು ಎಂಬ ಆಶಯದಿಂದ ಈ ತಾಯಿ ಬಸ್ಸಿಗೆ ಹಾಯ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.’ ಎಂದು ಪ್ರೊ. ಅಶೋಕ ಸ್ವೈನ್ video twitt ಮಾಡಿದ್ದಾರೆ.
ಇದು ಯಾವ ರಾಜ್ಯದಲ್ಲಿ ನಡೆದಿದೆ ಮತ್ತು ಈಕೆಯ ಹಿನ್ನೆಲೆ ಏನು, ಆತ್ಮಹತ್ಯೆಗೆ ಕಾರಣವೇನು ಎನ್ನುವುದಕ್ಕೆ ಸ್ಪಷ್ಟವಾದ ಕಾರಣಗಳು ತಿಳಿದುಬಂದಿಲ್ಲ. ಆದರೆ ನೆಟ್ಟಿಗರು ಈ ದೃಶ್ಯ ನೋಡಿ ಮರಗುತ್ತಿದ್ದಾರೆ. ಅವರ ಚರ್ಚೆ ಬಡವರು, ಶ್ರೀಮಂತರು, ಮತ್ತು ರಾಜಕಾರಣಿಗಳ ಸುತ್ತ ತಿರುಗುತ್ತಿದೆ. ಈಗಾಗಲೇ ಈ ವಿಡಿಯೋ ಅನ್ನು, 1 ಲಕ್ಷಕ್ಕಿಂತಲೂ ಹೆಚ್ಚು ಜನ ನೋಡಿದ್ದಾರೆ. ಸುಮಾರು 800ಕ್ಕೂ ಹೆಚ್ಚು ರೀಟ್ವೀಟ್ ಮಾಡಿದ್ದಾರೆ.