ಮಾಜಿ‌ ಸಚಿವೆ ಮೋಟಮ್ಮ ಮನೆ ಮುಂದೆ ಹೊತ್ತಿ ಉರಿದ ಬುಲೆಟ್, ಶಿವಮೊಗ್ಗದಲ್ಲಿ ಬೆಂಕಿಗೆ ಆಹುತಿಯಾದ ಬಸ್

ಚಿಕ್ಕಮಗಳೂರು, (ಜುಲೈ  17): ಮಾಜಿ‌ ಸಚಿವೆ ಮೋಟಮ್ಮ ನಿವಾಸದ ಮುಂದೆ ನಿಲ್ಲಿಸಿದ್ದ ಬುಲೆಟ್ ಬೈಕ್​ ಧಗ-ಧಗ ಹೊತ್ತಿ ಉರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿರುವ ಮಾಜಿ ಸಚಿವೆ ಮೋಟಮ್ಮ ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್​ನಲ್ಲಿ ಇಂದು(ಜುಲೈ 17) ಬೆಂಕಿ ಕಾಣಿಸಿಕೊಂಡಿದ್ದು, ಬೈಕ್​ನ ಕೆಲ ಭಾಗಗಳು​ ಸುಟ್ಟು ಭಸ್ಮವಾಗಿವೆ. ಮೋಟಮ್ಮ ಕಾರು ಚಾಲಕ ರಾಜೇಶ್​ಗೆ ಸೇರಿದ ಬುಲೆಟ್ ಬೈಕ್​ನ ಬ್ಯಾಟರಿ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿರುವವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನು ನಂದಿಸಿ ಪರಿಶೀಲನೆ ನಡೆಸಿದ್ದಾರೆ.