ಹಂಪಿಯಲ್ಲಿ ಶೆರ್ಪಾಗಳಿಂದ ಯೋಗಾಭ್ಯಾಸ, ಹರಿಗೋಲು ಸವಾರಿ

ವಿಜಯನಗರ: ವಿಶ್ವವಿಖ್ಯಾತ ಹಂಪಿಯಲ್ಲಿ (G20 Meeting) ಸಭೆಗೆ ಆಗಮಿಸಿರುವ ಶೆರ್ಪಾಗಳಿಗೆ ಯೋಗಾಭ್ಯಾಸ ಮಾಡಿಸಲಾಯಿತು. ಜಿ-20 ಸಭೆಗೆ ಭಾಗಿಯಾದ ಶೆರ್ಪಾಗಳು ಭಾನುವಾರ ಬೆಳಿಗ್ಗೆ ವಿಶ್ವಪಾರಪಂರಿಕ ತಾಣಕ್ಕೆ ಭೇಟಿ ನೀಡಿದರು. ಹಂಪಿಯಲ್ಲಿ ಸೂರ್ಯೋದಯ ಮುನ್ನ ತುಂಗಭದ್ರಾ ನದಿ ದಡದಲ್ಲಿರುವ ಪುರಂದರ ಮಂಟಪದಲ್ಲಿ ಯೋಗಾಭ್ಯಾಸ ಮಾಡಿದರು.

ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಜಿ-20 ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಗೆ ಆಗಮಿಸಿದ ಸದಸ್ಯ ಹಾಗೂ ಅತಿಥಿ ರಾಷ್ಟ್ರಗಳ ಅತ್ಯುನ್ನತ ಪ್ರತಿನಿಧಿಗಳು ಯೋಗಾಭ್ಯಾಸ ನಂತರ ಐತಿಹಾಸಿಕ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿ (ಕೊರಾಕಲ್ ರೈಡ್) ಮಾಡಿದರು.

ಹಂಪಿಯ ಚಕ್ರತೀರ್ಥದ ತುಂಗಭದ್ರಾ ನದಿಯಲ್ಲಿ ಹರಿಗೋಲು ಸವಾರಿಯ ಕೈಗೊಂಡು ಹಂಪಿಯ ಕಲ್ಲುಬಂಡೆ, ನದಿಯ ಪ್ರಾಕೃತಿಕ ಸೌಂದರ್ಯ ಸವಿದರು.

ಹಂಪಿಯಲ್ಲಿ ನಡೆದ ಜಿ 20 ಸಭೆ ಬಹುತೇಕ ಯಶಸ್ವಿಯಾಗಿದೆ. ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಗೆ ಮತ್ತು ಆಫ್ರಿಕಾ ಒಕ್ಕೂಟವನ್ನು ಜಿ20 ಗುಂಪಿಗೆ ಸೇರಿಸುವ ಬಗ್ಗೆ ಹಾಗೂ ಭಾರತ ಮಂಡಿಸಿದ್ದ ಇತರ ಬಹುತೇಕ ಪ್ರಸ್ತಾವನೆಗಳಿಗೆ ಸದಸ್ಯ ರಾಷ್ಟ್ರಗಳು ಸಮ್ಮತಿ ಸೂಚಿಸಿವೆ.