ಅನಾರೋಗ್ಯದಿಂದ ಅನಾಥವ್ಯಕ್ತಿ ನಿಧನ ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ನಾಗರಾಜ್ ನಾಯ್ಕ್

ಸಿದ್ದಾಪುರ : ತಾಲೂಕಿನ ಮುಗದೂರನಲ್ಲಿರುವ ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದಲ್ಲಿ ಆಶ್ರಯ ಪಡೆದಿದ್ದ ಆನಂದ ಅನಾರೋಗ್ಯದಿಂದ ನಿಧನ ಹೊಂದಿದ್ದು ಆಶ್ರಮದ ಮುಖ್ಯಸ್ಥ ನಾಗರಾಜ್ ನಾಯ್ಕ್ ಶಿರಸಿಯ ವಿದ್ಯಾನಗರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು
ನವೆಂಬರ್ 2020 ರಲ್ಲಿ ಕಾಯಿಲೆಯಿಂದ ಅಸಹಾಯಕ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಹೊನ್ನಾವರದ ಆನಂದ ಎನ್ನುವ ವ್ಯಕ್ತಿಯನ್ನು ಹೊನ್ನಾವರ ಪೋಲಿಸರ ಕೋರಿಕೆಯ ಮೇರೆಗೆ ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಆಶ್ರಮದಲ್ಲಿ ಆರೈಕೆ ಮಾಡಲಾಗುತ್ತಿತ್ತು. ಪದೇ ಪದೇ ಅನಾರೋಗ್ಯದಿಂದ ಬಳಲುತ್ತಿದ್ದ ಈ ವ್ಯಕ್ತಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿ ತಾಲೂಕಾ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಆನಂದ ನಿಧನ ಹೊಂದಿದ್ದು ಶಿರಸಿಯ ವಿದ್ಯಾನಗರ ರುದ್ರಭೂಮಿಯಲ್ಲಿ ಆನಂದನ ಅಂತ್ಯಸಂಸ್ಕಾರವನ್ನು ನಾಗರಾಜ್ ನಾಯ್ಕ್ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ