ದಾಂಡೇಲಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರಾದ ಅಂಕೋಲಾ ವಂದಿಗೆಯ ವಿಠೋಬ ಹಮ್ಮಣ್ಣ ನಾಯಕರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ.ಎನ್.ವಾಸರೆಯವರು ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ಅವರು ಗುರುವಾರ ನೀಡಿದ ಪತ್ರಿಕಾ ಪ್ರಕಟನೆಯಲ್ಲಿ ಪ್ರಗತಿಪರ ಕೃಷಿಕರೂ ಅಗಿದ್ದ ವಿಠೋಬ ನಾಯಕರು ಯಕ್ಷಗಾನದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ರಾವಣ, ದುಷ್ಟಬುದ್ಧಿ, ಭೀಮ, ಯಮ, ಘಟೋದ್ಗಜ, ಭೀಮ, ಕಿರಾತ, ಹನುಮಂತ, ಶಬರ , ಜಮದಗ್ನಿ ಸೇರಿದಂತೆ ಹಲವು ಪಾತ್ರಗಳನ್ನು ಮನೋಜ್ಞವಾಗಿ ಅಭಿನಯಿಸುತ್ತಿದ್ದ ವಿಠೋಬ ನಾಯಕರ ಗಾಂಭೀರ್ಯದ ಅಭಿನಯವೇ ಒಂದು ಆಕರ್ಷಣೆಯಾಗಿತ್ತು. ಸರಳ ಸಜ್ಜನರೂ ಆಗಿದ್ದ ಇವರ ಯಕ್ಷಗಾನ ಕಲಾ ಸೇವೆಗೆ ರಾಜ್ಯೋತ್ಸವ ಪ್ರಶಸ್ತಿಯ ಗೌರವ ಕೂಡಾ ಸಂದಿರುವುದು ಅಭಿಮಾನದ ಸಂಗತಿಯೇ ಆಗಿದೆ.
ಮನರಂಜನೆಯೇ ಇಲ್ಲದಂತಹ ಕಾಲದಲ್ಲಿ ಯಕ್ಷಗಾನದ ಮೂಲಕ ಮನರಂಜನೆ ಮೂಡಿಸಿದ ವಿಠೋಬ ನಾಯಕರ ಅಗಲಿಕೆ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದಷ್ಟು ಹಾನಿಯನ್ನುಂಟು ಮಾಡಿದೆ. ಈ ನೆಲದ ನಂಬಿಕೆಯAತೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಿ.ಎನ್. ವಾಸರೆ ಹಾಗೂ ಜಿಲ್ಲಾ ಕಸಾಪ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.