ಗದ್ದೆ ನಾಟಿ ಮಾಡಿ ಗಮನ ಸೆಳೆದ ಸಚಿವ ಮಂಕಾಳ ವೈದ್ಯ ಪುತ್ರಿ ಬೀನಾ ವೈದ್ಯ

ಸಚಿವರ ಮಕ್ಕಳು ಅಂದ್ರೆ ಎಸಿ.ಕಾರು ಐಷಾರಾಮಿ ಜೀವನ ನಡೆಸೋದು ಕಾಮನ್.‌ ಆದ್ರೆ ಸಚಿವ ಮಂಕಾಳ ವೈದ್ಯ ಅವರ ಪುತ್ರಿ ಬೀನಾ ವೈದ್ಯ, ಮಹಿಳೆಯೋರೊಂದಿಗೆ ಗದ್ದೆಗಿಳಿದು ನಾಟಿ ಮಾಡಿ ಗಮನ ಸೆಳೆದಿದ್ದಾರೆ…

ಈಗಿನ ಕಾಲದಲ್ಲಿ ಸಚಿವ, ಶಾಸಕರ ಮಕ್ಕಳು ಅಂದ್ರೆ ಎಸಿ.ಕಾರು ಐಷಾರಾಮಿ ಜೀವನ ನಡೆಸೋದು ಮಾಮೂಲಿ. ಆದ್ರೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾಗಿರುವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಮಂಕಾಳ ವೈದ್ಯ ಅವರ ಪುತ್ರಿ ಬೀನಾ ವೈದ್ಯ, ಮಹಿಳೆಯೋರೊಂದಿಗೆ ಗದ್ದೆಗಿಳಿದು ನಾಟಿ ಮಾಡಿ ಗಮನ ಸೇಳೆದಿದ್ದಾರೆ…

ಹೌದು.. ಬೀನಾ ವೈದ್ಯ ಮುರುಡೇಶ್ವರದಲ್ಲಿ ಗದ್ದೆಗೆಳಿದು ನಾಟಿ ಮಾಡಿದ್ದಾರೆ. ಬೀನಾ ಸದ್ಯ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು ತನ್ನ ಬಿಡುವಿನ ವೇಳೆಯಲ್ಲಿ ಮನೆಯ ಪಕ್ಕದಲ್ಲಿರುವ ಗದ್ದೆಗೆ ಹೋಗಿ ನಾಟಿ ಮಾಡಿ, ತಂದೆಯ ಸರಳತೆಗೆ ಸಾಕ್ಷಿಯಾಗಿದ್ದಾಳೆ…

ಇನ್ನು ವಿಧಾನಸಭಾ ಚುನಾವಣೆ ವೇಳೆ ಬೀನಾ, ತನ್ನ ತಂದೆಗೆ ಬೆನ್ನೆಲುಬಾಗಿ ನಿಂತಿದ್ಳು. ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ಮಾಡಿ, ಮಂಕಾಳ ವೈದ್ಯರ ಗೆಲುವಿಗೆ ಶ್ರಮಿಸಿ, ತಾಲೂಕು ಹಾಗೂ ಜಿಲ್ಲೆಯ ಜನತೆಯ ಗಮನ ಸೆಳೆದಿದ್ದಳು.
ಆದ್ರೀಗ ತನ್ನ ಬಿಡುವಿನ ವೇಳೆಯಲ್ಲಿ ಗದ್ದೆ ನಾಟಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ…

ಉದಯ ನಾಯ್ಕ, ನುಡಿ ಸಿರಿ ನ್ಯೂಸ್‌, ಭಟ್ಕಳ