ಭಕ್ತಕಳ್ಳ; ಹನುಮಾನ್ ಚಾಲೀಸಾ ಪಠಿಸಿ ಕಾಣಿಕೆ ಡಬ್ಬಿಯಿಂದ ರೂ. 5,000 ಕದ್ದ ಕಳ್ಳ

ಈ ಘಟನೆ ಹರಿಯಾಣದ ರೇವಾರಿ ಜಿಲ್ಲೆಯ ಧರುಹೇರಾದ ಹನುಮಂತನ ದೇವಸ್ಥಾನವೊಂದರಲ್ಲಿ ನಡೆದಿದೆ. ಈ ಕಳ್ಳ ಹನುಮಂತನ ಮೂರ್ತಿಯೆದುರು ಕುಳಿತು ಕೆಲ ನಿಮಿಷಗಳ ಕಾಲ ಹನುಮಾನ್​ ಚಾಲೀಸಾ ಪಠಿಸಿದ್ದಾನೆ. ನಂತರ ರೂ. 10 ಅನ್ನು ಹನುಮಂತನಿಗೆ ಅರ್ಪಿಸಿ, ಕಾಣಿಕೆ ಡಬ್ಬಿಯಲ್ಲಿದ್ದ ರೂ. 5,000 ಅನ್ನು ಕದ್ದು ಪರಾರಿಯಾಗಿದ್ದಾನೆ. ಇದು ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇವನ ಕುತೂಹಲಕಾರಿ ಘಟನೆ ಸಾಕಷ್ಟು ಚರ್ಚೆಗೆ ಈಡಾಗುತ್ತಿದೆ.

ಮೊದಲಿಗೆ ಅವನು ಹನುಮಂತನೆದುರು ಕೆಲ ನಿಮಿಷಗಳ ಕಾಲ ಕುಳಿತುಕೊಳ್ಳುತ್ತಾನೆ. ಚಾಲೀಸಾ ಪಠಿಸಿ ಧ್ಯಾನಿಸುತ್ತಾನೆ. ನಂತರ ಹನುಮಂತನ ಪಾದಗಳ ಮೇಲೆ ರೂ. 10 ಇಡುತ್ತಾನೆ. ಜಾಗರೂಕತೆಯಿಂದ ಕಾಣಿಕೆ ಪೆಟ್ಟಿಗೆಯನ್ನು ತೆರೆದು ಅಲ್ಲಿದ್ದ ನೋಟುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಾನೆ. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.