ಕಾರ್ಯಕರ್ತರ ಆಕ್ರೋಶದ ಬೆನ್ನಲ್ಲೇ ಸಚಿವ ಸುನೀಲ್ ಕುಮಾರ್ ಸ್ಥಳಕ್ಕೆ ದೌಡು

ಪುತ್ತೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಿನ್ನೆ ರಾತ್ರಿ ದುಷ್ಕರ್ಮಿಗಳಿಂದ ಪ್ರವೀಣ್ ಬರ್ಬರವಾಗಿ ಹತ್ಯೆಯಾದ ಬಳಿಕ ಹಲವಾರು ಹಿಂದು ಸಂಘಟನೆಗಳ ಮುಖಂಡರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ರು. ಆದರೆ ಯಾವೊಬ್ಬ ಬಿಜೆಪಿ ಮುಖಂಡರೂ ಸ್ಥಳಕ್ಕೆ ಆಗಮಿಸಿಲ್ಲ ಎಂದು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು. ಬಿಜೆಪಿಯ ಘಟಾನುಘಟಿ ನಾಯಕರು ಕೇವಲ ಖಂಡನಾ ಹೇಳಿಕೆಗಷ್ಟೇ ಸೀಮಿತವಾಗಿದ್ರು ಹೊರತು ಸ್ಥಳಕ್ಕೆ ಯಾರೂ ಬಂದು ಮೃತದೇಹದ ದರ್ಶನ ಪಡೆದಿರಲಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಬಿಜೆಪಿ ಮುಖಂಡರು ಗುರಿಯಾಗಿದ್ರು.

ಕಾರ್ಯಕರ್ತರ ಆಕ್ರೋಶ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸೂಚನೆಯ ಹಿನ್ನೆಲೆಯಲ್ಲಿ ಇದೀಗ ಇಂಧನ ಸಚಿವ ಸುನೀಲ್ ಕುಮಾರ್, ಪ್ರವೀಣ್ ಅಂತಿಮ ದರ್ಶನಕ್ಕಾಗಿ ನೆಟ್ಟಾರ್ ಗೆ ತೆರಳುತ್ತಿದ್ದಾರೆ. ಸಚಿವರ ಇಂದಿನ ಎಲ್ಲ ಕಾರ್ಯಕ್ರಮಗಳು ರದ್ದುಗೊಂಡಿದ್ದು, ಮಂಗಳೂರಿನಿಂದ ನೇರವಾಗಿ ನೆಟ್ಟಾರ್ ಗೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.