ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ 15 ಮಂದಿ ಶಂಕಿತರನ್ನು ಬೆಳ್ಳಾರೆಯಲ್ಲೇ ಬಂಧಿಸಲಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಇನ್ನು ಬಂಧಿತರೆಲ್ಲರೂ ಸ್ಥಳೀಯರು ಎಂಬ ಮಾಹಿತಿ ಸಿಕ್ಕಿದೆ.
ರಾತ್ರಿ ಪ್ರವೀಣ್ ನೆಟ್ಟಾರು ಬರ್ಬರ ಕೊಲೆಯಾಗಿತ್ತು. ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಕೊಲೆ ಮಾಡಿ ಎಸ್ಕೇಪ್ ಆಗಿದ್ರು. ಘಟನೆ ನಡೆದ ತಕ್ಷಣ ಪೊಲೀಸ್ ಇಲಾಖೆ ಎಲ್ಲಾ ಕಡೆ ನಾಕಾಬಂದಿ ಹಾಕಿ ಆರೋಪಿಗಳ ಪತ್ತೆಗೆ ತಲಾಶ್ ನಡೆಸಿದ್ರು. ಇದೀಗ 15 ಮಂದಿಯನ್ನ ಬಂಧಿಸಲಾಗಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕೇರಳ ಮೂಲದ ದುಷ್ಕರ್ಮಿಗಳು.?
ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ಕೇರಳ ಮೂಲದವರು ಎನ್ನಲಾಗಿದೆ. ಕೇರಳ ರಿಜಿಸ್ಟೆçÃಶನ್ ಹೊಂದಿದ್ದ ಬೈಕನಲ್ಲಿ ಹಂತಕರು ಬಂದಿದ್ರು ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಕೇರಳ ಗಡಿಯಿಂದ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಆ ಭಾಗದ ಸುತ್ತ ಮುತ್ತ ಹದ್ದಿನ ಕಣ್ಣಿಡಲಾಗಿದೆ. ಅಲ್ಲದೇ ಕೇರಳ ಪೊಲೀಸರ ಜೊತೆಗೂ ಪೊಲೀಸರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.