ಕುಮಟಾದ ಕಡೆಕೋಡಿಯಲ್ಲಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ – ಆತಂಕಗೊಂಡ ಜನ

ಕುಮಟಾ ತಾಲೂಕಿನ ಕಡೇಕೋಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥದಲ್ಲಿ ಟ್ಯಾಂಕರ್ವೊಂದರಿಂದ ಅನಿಲ ಸೋರಿಕೆಯಾಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ…

ಕುಮಟಾ ತಾಲೂಕಿನ ಕಡೇಕೋಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥದಲ್ಲಿ ಟ್ಯಾಂಕರ್ವೊಂದರಿಂದ ಅನಿಲ ಸೋರಿಕೆಯಾಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಭಾನುವಾರ ಸಂಜೆ ನಡೆದಿದೆ…

ಗೋವಾ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಹಿಂಭಾಗದ ಪೈಪ್ಗಳ ಮೂಲಕವೇ ಸೋರುತ್ತಿದ್ದ ಬಿಳಿ ಬಣ್ಣದ ದ್ರವವು ತಕ್ಷಣ ಮೋಡದಂತೆ ಸುತ್ತಲೂ ಪಸರಿಸತೊಡಗಿತ್ತು. ಜನ ಗಾಬರಿಯಾಗಿ ಮನೆಗಳಿಂದ ಹೊರಬಂದು ನಿಂತರೆ, ವಾಹನಗಳು ಅಲ್ಲಲ್ಲೇ ನಿಂತು ಹಿಂತಿರುಗಿ ದೂರ ಸರಿಯತೊಡಗಿದವು.

ಬಳಿಕ ಸೋರುತ್ತಿದ್ದ ಟ್ಯಾಂಕರ್ ಚಾಲಕ ಜನರಿಗೆ ಮಾಹಿತಿ ನೀಡಿ, ಇದು ಲಿಕ್ವಿಡ್ ನೈಟ್ರೋಜನ್ ದ್ರವವಾಗಿದ್ದು ಅಪಾಯವಿಲ್ಲ. ತಂತ್ರಜ್ಞರಿಗೆ ಕರೆ ಮಾಡಿದ್ದೇನೆ. ಬಂದು ಸರಿಪಡಿಸುತ್ತಾರೆ. ಯಾರೂ ಹೆದರಬೇಕಾಗಿಲ್ಲ ಎಂದು ತಿಳಿಸಿದ್ದಾನೆ..
ಇದರಿಂದ ಹೆದ್ದಾರಿಯಲ್ಲಿ ವಾಹನಗಳು ಸಂಚರಿಸ ತೊಡಗಿ, ಸಾರ್ವಜನಿಕರು ಸಮಾಧಾನದ ನಿಟ್ಟುಸಿರು ಬಿಟ್ಟರು. ಬಳಿಕ ಚಾಲಕ ಟ್ಯಾಂಕರ್ ಅನ್ನು ಹೊಳೆಗದ್ದೆ ಟೋಲ್ ನಾಕಾದತ್ತ ಮುಂದಕ್ಕೆ ಸಾಗಿಸಿದ್ದಾನೆ…

ಇನ್ನು 2015ರಲ್ಲಿ ಕುಮಟಾದ ಬರ್ಗಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸ್ಫೋಟಗೊಂಡಿತ್ತು. ಈ ವೇಳೆ ಬರ್ಗಿಯ ಹೆದ್ದಾರಿ ಬಳಿ ಇದ್ದ ಮನೆಗಳು ಸಂಪೂರ್ಣ ಹೊತ್ತಿ ಉರಿದಿದ್ವು. ಈ ದುರ್ಘಟನೆಯಲ್ಲಿ 13 ಜನ ಸಾವನ್ನಪ್ಪಿದ್ದರು. ಈ ದುರಂತ ಕುಮಟಾ ಜನತೆಗೆ ಕರಾಳ ದಿನವಾಗಿದ್ದು, ಇದೀಗ ಗ್ಯಾಸ್‌ ಟ್ಯಾಂಕರ್‌ ಅನಿಲ್‌ ಸೋರಿಕೆ ವಿಚಾರಕ್ಕೆ ಭಯ ಭೀತರಾಗಿದ್ರು…

ಮನು ವೈದ್ಯ, ನುಡಿ ಸಿರಿ ನ್ಯೂಸ್‌, ಕುಮಟಾ