ತೆಂಗಿನಕಾಯಿ ಕಾರ್ಖಾನೆಗಳ ಮೇಲೆ ದಿಢೀರ್​ ದಾಳಿ: 10ಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ

ತುಮಕೂರು: ಜಿಲ್ಲೆಯ  Tipatur ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿರಿವ ತೆಂಗಿನಕಾಯಿ ಕಾರ್ಖಾನೆಗಳ ಮೇಲೆ ಕರ್ನಾಟಕ ಮಕ್ಕಳ ರಕ್ಷಣಾ ಆಯೋಗ ದಿಢೀರ್ ದಾಳಿ‌ ಮಾಡಿ 10ಕ್ಕೂ ಹೆಚ್ಚು ಬಾಲಕಾರ್ಮಿಕರ ರಕ್ಷಣೆ ಮಾಡಿದ್ದಾರೆ. ತಿಪಟೂರು ನಗರದ ಹೊಸಪಾಳ್ಯ, ಮಂಜುನಾಥನಗರ, ಆಲೂರು ಗೇಟ್​​​ಗಳಲ್ಲಿನ ಕಾರ್ಖಾನೆಗಳ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಕಾರ್ಖಾನೆ ಮಾಲೀಕರು ಮಕ್ಕಳನ್ನು ಕೊಠಡಿ ಒಂದರಲ್ಲಿ ಕೂಡಿ ಹಾಕಿದ್ದರು. ಇದನ್ನು ತಿಳಿದ ಆಯೋಗ ಕೂಡಿಹಾಕಿದ್ದ ಮಕ್ಕಳನ್ನ ರಕ್ಷಣೆ ಮಾಡಿ ಕಾರ್ಖಾನೆ ಮಾಲಿಕರ ವಿರುದ್ಧ ಕ್ರಮಕ್ಕೆ ಸೂಚಿಸಿದೆ.

ಬಾಲಾಜಿ ಕೊಕೊನಟ್ ಇಂಡಸ್ಟ್ರಿ ಎಂಬ ಕಾರ್ಖಾನೆಯವರು ಮಕ್ಕಳನ್ನ ಅಕ್ರಮವಾಗಿ ಕೂಡಿಹಾಕಿದ್ದರು. ಅಲ್ಲದೇ ಕಾರ್ಖಾನೆಗಳಲ್ಲಿ ಮಹಿಳಾ ಕಾರ್ಮಿಕರು ಸಮವಸ್ತ್ರ, ಮಾಸ್ಕ್ ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲದೇ ಹೀನಾಯ ಸ್ಥಿತಿಯಲ್ಲಿ ಕೆಲಸ ಮಾಡುತ್ತಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಆಯೋಗ ಗರಂ ಆಗಿದೆ

ಇನ್ನು ಆಯೋಗ ತಿಪಟೂರು ತಾಲೂಕಿನಲ್ಲಿರುವ ಎಲ್ಲಾ ಕಾರ್ಖಾನೆಗಳು ಮತ್ತು ಕಾರ್ಮಿಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ.