ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಜುಲೈ 13ರವರೆಗೂ ಭಾರಿ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾಗೆಯೇ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ಮಳೆಯಾಗಲಿದ್ದು, ಕೊಡಗಿನಲ್ಲಿ ಭಾರಿ ಮಳೆ ಸುರಿಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೊಲ್ಲೂರು, ಕುಮಟಾ, ಗೇರುಸೊಪ್ಪ, ಕ್ಯಾಸಲ್ ರಾಕ್, ಕೊಟ್ಟಿಗೆಹಾರ, ಹೊನ್ನಾವರ, ಶಿರಾಲಿ, ಗೋಕರ್ಣ, ಮಂಕಿ, ಬೆಳ್ತಂಗಡಿ, ಸುಬ್ರಹ್ಮಣ್ಯ, ಮಂಗಳೂರು, ಅಂಕೋಲಾ, ಭಾಗಮಂಡಲ, ಹುಂಚದಕಟ್ಟೆಯಲ್ಲಿ ಅತ್ಯಧಿಕ ಮಳೆಯಾಗಿದೆ. ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ, ಸುಳ್ಯ, ಕದ್ರಾ, ಕಮ್ಮರಡಿ, ಲಿಂಗನಮಕ್ಕಿ, ಲೋಂಡಾ, ಮಂಚಿಕೆರೆ,ಕಿರವತ್ತಿ, ಸಕಲೇಶಪುರ, ತಾಳಗುಪ್ಪ, ಕೋಟ, ಕಳಸ, ನಾಪೋಕ್ಲು, ಪುನ್ನಂಪೇಟೆ, ಯಲ್ಲಾಪುರ, ಹಳಿಯಾಳ, ಬನವಾಸಿ, ಕಾರವಾರ, ಕುಂದಾಪುರ, ಬೆಳಗಾವಿ, ಕೊಪ್ಪ, ಜಯಪುರ, ಶೃಂಗೇರಿ, ಬಾಳೆಹೊನ್ನೂರು, ಎನ್ಆರ್ ಪುರ, ನಿಪ್ಪಾಣಿ, ಲಿಂಗಸುಗೂರು, ಗುತ್ತಲ್, ಹೊಸಕೋಟೆ, ಹರಪನಹಳ್ಳಿ, ಬೇಲೂರು, ಬಂಡೀಪುರ, ಸರಗೂರು, ಚಿಂತಾಮಣಿಯಲ್ಲಿ ಮಳೆಯಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ, ಉತ್ತರ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.