ಶಾಲೆಯಿಂದ ಮನೆಗೆ ಹೋಗ್ತಿದ್ದ ವೇಳೆ ಬೀದಿ ನಾಯಿ ದಾಳಿ; ಬಾಲಕನ ಸ್ಥಿತಿ ಗಂಭೀರ!

ಗದಗ (ಜು.8) : ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ಬೀದಿನಾಯಿಗಳ ಗುಂಪು ದಾಳಿ ಮಾಡಿರುವ ಘಟನೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಹಿರೇಬಜಾರ್ ಬಡಾವಣೆಯಲ್ಲಿ ನಡೆದಿದೆ.

ಪಟ್ಟಣದ ಶಿವಾಜಿ ಪೇಟೆಯ ಆದಿ ಪವಾರ್ ಗಾಯಗೊಂಡ (8) ಬಾಲಕ. ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿರುವ ಬೀದಿನಾಯಿಗಳು. ಬಾಲಕನ ಕಾಲು ಬೆನ್ನಿನ ಭಾಗಕ್ಕೆ ಬಲವಾಗಿ ಕಚ್ಚಿ ಗಾಯಗೊಳಿಸಿರುವ ಶ್ವಾನಗಳು ಬಾಲಕ ತಪ್ಪಿಸಿಕೊಳ್ಳಲು ಯತ್ನಿಸಿದಂತೆ ಮೇಲೆರಗಿ ದಾಳಿ ಮಾಡಿರುವ ಶ್ವಾನಗಳು. ಈ ವೇಳೆ ನಾಯಿಗಳು ಜೋರಾಗಿ ಬೋಗಳುತ್ತಿರುವ ಶಬ್ದ ಕೇಳಿ ಬಂದ ಸ್ಥಳೀಯರು. ತಕ್ಷಣ ಬೀದಿನಾಯಿಗಳ ಗುಂಪುನ್ನು ಓಡಿಸಿ ಬಾಲಕನ ರಕ್ಷಣೆ ಮಾಡಿದ ಸ್ಥಳೀಯರು. ಕೈ, ಬೆನ್ನಿನ ಭಾಗಕ್ಕೆ ಕಚ್ಚಿರುವುದರಿಂದ ತೀವ್ರವಾಗಿ ಗಾಯಗೊಂಡಿರುವ ಬಾಲಕ. ಗಾಯಾಳು ಬಾಲಕನಿಗೆ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಿದ ಸ್ಥಳೀಯರು.

ಬೀದಿನಾಯಿಗಳು ಬಾಲಕನ ಮೇಲೆ ಎರಗಿ ದಾಳಿ ಮಾಡಿದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ. ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದ್ದು, ಈ ಹಿಂದೆಯೂ  ಮಕ್ಕಳು, ದೊಡ್ಡವರೆನ್ನದೇ ದಾಳಿ ಮಾಡಿವೆ. ಇದೀಗ ಬಾಲಕನ ಮೇಲೆ ನಡೆದಿರುವ ದಾಳಿಯಿಂದಾಗಿ ಬಾಲಕರು ಶಾಲೆಗೆ ಹೋಗಲು ಹೆದರುವಂತಾಗಿದೆ. ಮುಖ್ಯರಸ್ತೆಯಲ್ಲೇ ಬೀದಿನಾಯಿಗಳು ಗುಂಪುಗುಂಪಾಗಿ ತಿರುಗಾಡುತ್ತಿದ್ದರೂ, ಯಾವುದೇ ಕ್ರಮ ಕೈಗೊಳ್ಳದ ಪುರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.