ಕೋಟ್ಯಧೀಶನಾದ ಮಾದಪ್ಪ- ನಗದು ಜೊತೆ 77 ಗ್ರಾಂ ಚಿನ್ನ, 2 ಕೆ.ಜಿ ಬೆಳ್ಳಿ ಸಂಗ್ರಹ

ಚಾಮರಾಜನಗರ: ಎಂದಿನಂತೆ ಈ ಬಾರಿಯೂ ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದ ಮೇಲಿರುವ ಮಲೆಮಹದೇಶ್ವರನ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ಬಾರಿಯೂ ಮಾದಪ್ಪ ಕೋಟ್ಯಧೀಶನಾಗಿದ್ದಾನೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದಿದೆ. ಈ ವೇಳೆ ಮಹದೇಶ್ವರನ ಹುಂಡಿಯಲ್ಲಿ 2.47 ಕೋಟಿ ರೂ. ಗೂ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ. 

ಕಳೆದ 36 ದಿನಗಳ ಅವಧಿಯಲ್ಲಿ ಒಟ್ಟು 2,47,15,655 ರೂ. ನಗದು ಸಂಗ್ರಹವಾಗಿದೆ. ನಗದು ಹಣದ ಜೊತೆಗೆ 77 ಗ್ರಾಂ ಚಿನ್ನ, 2 ಕೆ.ಜಿ 250 ಗ್ರಾಂ ಬೆಳ್ಳಿಯನ್ನು ಭಕ್ತರು ಹುಂಡಿಗೆ ಹಾಕುವ ಮೂಲಕ ಮಾದಪ್ಪನಿಗೆ ಸಮರ್ಪಿಸಿದ್ದಾರೆ. ನಗದು ಹಣದ ಪೈಕಿ 12 ಲಕ್ಷ ರೂ. ನಾಣ್ಯದ ರೂಪದಲ್ಲೇ ಸಂಗ್ರಹವಾಗಿರೋದು ವಿಶೇಷವಾಗಿದೆ.