ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಜನರಲ್ಲಿ ಲಂಗ್ಸ್ ಪ್ರಾಬ್ಲಂ ಹೆಚ್ಚಾಗುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಶೇ 25 ರಿಂದ 30 % ರಷ್ಟು ಲಂಗ್ಸ್ ಸಮಸ್ಯೆ ಜನರಿಗೆ ಕಾಡ್ತಿದೆ. ಬೆಂಗಳೂರಿನಲ್ಲಿ ಶ್ವಾಸಕೋಶದ ಸಮಸ್ಯೆ ಖಾಯಿಲೆಗಳ ಏರಿಕೆ ಹಿನ್ನಲೆ ರಾಜ್ಯದಲ್ಲಿಯೇ ಮೊದಲ ಹಾಗೂ ವಿನೂತನ ತಂತ್ರಜ್ಞಾನಕ್ಕೆ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆ ಸಾಕ್ಷಿಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇತ್ತಿಚ್ಚಿನ ಕೆಲವು ವರ್ಷಗಳಿಂದ ಲಂಗ್ಸ್ ಕ್ಯಾನ್ಸರ್, ಶ್ವಾಸಕೋಶದ ಸಮಸ್ಯೆ ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆ ಜನರಲ್ಲಿ ಹೆಚ್ಚಾಗಿದೆ. ಹೀಗಾಗಿ ಲಂಗ್ಸ್ ಕ್ಯಾನ್ಸರ್ ನಿಂದ ಸಾವಿನ ಪ್ರಕರಣಗಳನ್ನ ಕಡಿಮೆ ಮಾಡಲು ಬಡವರಿಗೆ ಉತ್ತಮ ಚಿಕಿತ್ಸೆ ನೀಡಲು ಇಡೀ ರಾಜ್ಯದಲ್ಲೇ ಮೊದಲ ಚೆಸ್ಟ್ ಫಿಸಿಯೋಥೆರಪಿಯನ್ನ ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನಿರ್ಮಾಣ ಮಾಡಲಾಗಿದೆ. ದೀರ್ಘಾವಧಿ ಶ್ವಾಸಕೋಶ ಸಂಬಂಧಿ ಖಾಯಿಲೆಯಿಂದ ಬಳಲುತ್ತಿರುವವರಿಗೆ ಇದೊಂದು ಗುಡ್ ನ್ಯೂಸ್ ಆಗಿದೆ.
ರಾಜ್ಯದಲ್ಲಿಯೇ ನೂತನ ಹಾಗೂ ಪ್ರಥಮ ಚೆಸ್ಟ್ ಫಿಸಿಯೋ ಥೆರಪಿ ಕೇಂದ್ರ ಇದಾಗಿದೆ. ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಈ ಕೇಂದ್ರ ನಿರ್ಮಾಣವಾಗಿದೆ. ಇಷ್ಟು ದಿನ ಕೇವಲ ಮಸಲ್ಸ್ ಸಂಬಂಧ ಫಿಸಿಯೊಥೆರಪಿ ನೀಡಲಾಗ್ತಿತ್ತು. ಇದೀಗ ಚೆಸ್ಟ್‌ಗೂ ಕೂಡಾ ಫಿಸಿಯೋಥೆರಪಿ ಆರಂಭವಾಗಿದ್ದು ಹೆಚ್ಚು ಮೆಡಿಸನ್ ಇಲ್ಲದೆಯೇ ಲಂಗ್ಸ್ ಖಾಯಿಲೆಗೆ ಇಲ್ಲಿ ಸಲ್ಯುಷನ್ ಸಿಗಲಿದೆ.
ಲಂಗ್ಸ್ ಸಂಬಂಧಿಸಿದ ಯಾವುದೇ ತರದ ಸಮಸ್ಯೆಗಳಿಗೆ ಎಕ್ಸಸೈಸ್‌ನಿಂದಲೇ ಶ್ವಾಸಕೋಶ ಸಂಬಂಧಿ ಖಾಯಿಲೆಯನ್ನ ಗುಣಪಡಿಸಿಕೊಳ್ಳಬಹುದಾಗಿದ್ದು ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಮಾರ್ಡನ್ ಚೆಸ್ಟ್ ಫಿಜಿಯೋಥೆರಪಿ ಶುರು ಮಾಡಲಾಗಿದೆ. ಈ ಫಿಸಿಯೋಥೆರಪಿ ಮೂಲಕ ಲಂಗ್ಸ್ ಸಮಸ್ಯೆಯನ್ನು ಕಡಿಮೆ ಮಾಡಬಹುದಾಗಿದ್ದು ಹೊಸದೊಂದು ಪ್ರಯತ್ನಕ್ಕೆ ರಾಜೀವ ಗಾಂಧೀ ಆಸ್ಪತ್ರೆ ಸಾಕ್ಷಿಯಾಗಿದೆ.
ಸುಮಾರು 3 ಕೋಟಿ ವೆಚ್ಚದಲ್ಲಿ ಈ ಸೆಂಟರ್ ಹಾಗೂ ಎಕ್ಯೂಪ್‌ಮೆಂಟ್‌ಗಳನ್ನು ರೆಡಿ ಮಾಡಲಾಗಿದ್ದು ತ್ರೆಡ್‌ಮಿಲ್, ಮಲ್ಟಿ ಸ್ಟೇಷನರಿ ಜಿಮ್, ಕ್ರಾಸ್ ಟ್ರೈನರ್, ಸ್ಟಾಟಿಕ್ ಸೈಕಲ್, ಸ್ಟೆಪ್ಪರ್, ಕ್ರಾಸ್‌ಸ್ಟೆಪ್ಪರ್‌ಗಳ ಮೂಲಕ ಚೆಸ್ಟ್ ಫಿಸಿಯೋಥೆರಪಿ ಮಾಡಲು ಮುಂದಾಗಿದೆ. ದೇಹದಲ್ಲಿ ಸ್ಯಾಚುರೇಷನ್ ಕಡಿಮೆಯಾದಾಗ ಆಕ್ಸಿಜನ್ ಜೊತೆಗೆ ಈ ಚೆಸ್ಟ್ ಫಿಸಿಯೋ ಥೆರಪಿ ಮಾಡಲಾಗ್ತಿದ್ದು ಅನೇಕ ಸಮಸ್ಯೆಗಳಿಗೆ ವಿವಿಧ ಬಗೆಯ ಥೆರಪಿಗಳನ್ನ ನೀಡಲಾಗ್ತಿದೆ. ಈ ಹಿನ್ನೆಲೆ ಶೇ. 40% ರಷ್ಟು ರೋಗಿಗಳು ಈ ಚೆಸ್ಟ್ ಫಿಸಿಯೋಥೆರಪಿ ಮೂಲಕವೇ ಗುಣಮುಖರಾಗಿಸಲು ಆಸ್ಪತ್ರೆ ಮುಂದಾಗಿದೆ.
ಒಟ್ನಲ್ಲಿ ಈ ಚೆಸ್ಟ್ ಫಿಸಿಯೋಥೆರಪಿಯಿಂದ ರೋಗಿಗಳಿಗೆ ಅನುಕೂಲವಾಗಲಿದ್ದು, ಇನ್ಮುಂದೆ ಶ್ವಾಸಕೋಶದ ಸಮಸ್ಯೆಗೆ ನೀವು ಎಕ್ಸಸೈಸ್ ಮೂಲಕವೇ ಚಿಕಿತ್ಸೆ ಪಡೆಯಬಹುದು.