ಲಕ್ನೋ: ಮನಷ್ಯರು ಮಾತ್ರ ಕಳ್ಳತನ ಮಾಡುವುದನ್ನು ನೋಡಿರಬಹುದು, ಆದರೆ ಇಲ್ಲೊಂದು ವೈರಲ್ ಆಗಿರುವ ವೀಡಿಯೊದಲ್ಲಿ ಮಂಗವೊಂದು ಬೈಕಿನಿಂದ 1.5 ಲಕ್ಷ ರೂ. ಹಣವನ್ನು ಕಳ್ಳತನ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಪೊಲೀಸರಿಗೆ ಯಾವುದೇ ದೂರ ನೀಡಿಲ್ಲ, ಉತ್ತರ ಪ್ರದೇಶದ ಶಹಾಬಾದ್‌ದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಶಹಾಬಾದ್ ನೋಂದಾವಣೆ ಕಚೇರಿಯ ಹೊರಭಾಗದಲ್ಲಿ ದ್ವಿಚಕ್ರವಾಹನದಲ್ಲಿ ₹ 1.5 ಲಕ್ಷ ನಗದು ಇರುವ ಬ್ಯಾಗನ್ನು ಮಂಗ ತೆಗೆಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ . ಬೈಕ್ ಮಾಲೀಕ ಶರಾಫತ್ ಹುಸೇನ್ ಸೇಲ್ ಡೀಡ್ಗಾಗಿ ಕಚೇರಿಗೆ ಬಂದಿದ್ದರು ಎಂದು ಹೇಳಿದ್ದಾರೆ.
ನೋಂದಾವಣೆ ಕಚೇರಿಯ ಹೊರಗಿನ ಪಾರ್ಕಿಂಗ್ ಸ್ಥಳದಲ್ಲಿ ಮಂಗ ಎಲ್ಲಾ ಬೈಕ್‌ಗಳಲ್ಲಿರುವ ಬ್ಯಾಗ್‌ಗಳನ್ನು ಪರಿಶೀಲನೆ ನಡೆಸುತ್ತಿರುವುದನ್ನು ಈ ವೀಡಿಯೊದಲ್ಲಿ ನೋಡಬಹುದು. ಎಲ್ಲಾ ಬ್ಯಾಗ್‌ಗಳ ಸಂಪೂರ್ಣ ಹುಡುಕಾಟ ನಡೆಸಿದ ನಂತರ ಈ ಮಂಗ ₹ 1.5 ಲಕ್ಷ ನಗದು ಇರುವ ಬ್ಯಾಗ್ನ್ನು ತೆಗೆದುಕೊಂಡು ಹೋಗಿದೆ.
ಹುಸೇನ್ ಅವರು ಹಣ ಕಳವಾಗಿರುವುದನ್ನು ತಿಳಿದುಕೊಂಡು, ಕಚೇರಿಯ ಹೊರಗೆ ಬಂದಿದ್ದರೆ, ಸ್ವಲ್ಪ ಹೊತ್ತು, ಗಾಬರಿಯಾಗಿದ್ದರು. ಅವರು ಹೊರಗೆ ಬರುವಷ್ಟರಲ್ಲಾಗಲೇ ಕೋತಿ ಸ್ಥಳದಿಂದ ನಾಪತ್ತೆಯಾಗಿತ್ತು. ನಂತರ ಎಲ್ಲರು ಕೋತಿಯ ಕೈಯಲ್ಲಿದ್ದ 1.5 ಲಕ್ಷ ಹಣವನ್ನು ಪಡೆದುಕೊಳ್ಳಲು ಹರಸಾಹಸ ಮಾಡಿ, ಹೇಗಾದರೂ ಬ್ಯಾಗ್ನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಅದರಲ್ಲಿದ್ದ ಹಣಕ್ಕೆ ಯಾವುದೇ ತೊಂದರೆ ಮಾಡಿಲ್ಲ ಎಂದು ಹೇಳಿದ್ದಾರೆ.