ಬೆಂಗಳೂರು: ಜೈಲಿನಲ್ಲಿ ನಡೆಯುವ ಅಕ್ರಮಗಳಿಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಕೈದಿಗಳ ಕಳ್ಳಾಟಕ್ಕೆ ಪೋಲೀಸರೇ ಸಾಥ್ ನೀಡುತ್ತಿದ್ದಾರೆ. ಹೌದು ಪರಪ್ಪನ ಅಗ್ರಹಾರದಲ್ಲಿ ಹಾಗೂ ಮೊಬೈಲ್ ಸಾಗಿಸಲು ಪೊಲೀಸರೇ ಬೆಂಬಲ ನೀಡುತ್ತಿದ್ದಾರೆ. ಕೈದಿಗಳಾದ ಗಿರೀಶ್ ಮತ್ತು ರಾಮ್ ಭವನ್ರನ್ನ ಪೋಲೀಸರು ಕೋರ್ಟ್ಗೆ ಕರೆದುಕೊಂಡು ಹೋಗಿದ್ದರು. ಬಳಿಕ ಕೋರ್ಟ್ನಿಂದ ಮರಳಿ ಜೈಲಿಗೆ ವಾಪಸ್ ಬಂದಿದ್ದ ಆರೋಪಿಗಳನ್ನ ಜೈಲಿನ ಸಿಬ್ಬಂದಿಯವರು ತಪಾಸಣೆ ಮಾಡಿದ್ದು, ಈ ವೇಳೆ ಎಂಟು ಮೊಬೈಲ್ ಹಾಗೂ 57 ಗ್ರಾಂ ಬ್ರೌನ್ ಶುಗರ್ ಜಪ್ತಿ ಮಾಡಲಾಗಿದೆ.
ಜೈಲಿನಿಂದ ಬಂದ ಖೈದಿಗಳನ್ನ ತಪಾಸಣೆ ಸಂದರ್ಭದಲ್ಲಿ ತೊಡೆ ಭಾಗದಲ್ಲಿ ಕಪ್ಪು ಬಣ್ಣದ ಟೇಪ್ನಿಂದ ಸುತ್ತಿಕೊಂಡು ಮೊಬೈಲ್ ಮತ್ತು ಮಾದಕ ವಸ್ತುವನ್ನ ಬಚ್ಚಿಟ್ಟಿದ್ದು ಬೆಳಕಿಗೆ ಬಂದಿದೆ. ಗಿರೀಶ್ ಮತ್ತು ರಾಮ್ ಭವಾನ್ನ್ನು ವಶಕ್ಕೆ ಪಡೆದು ಪೋಲೀಸರು ವಿಚಾರಣೆ ನಡೆಸಿದ ವೇಳೆ ಎಸ್ಕಾರ್ಟ್ ನೀಡಿದ್ದ ಪೊಲೀಸರ ಕಳ್ಳಾಟ ಬಯಲಾಗಿದೆ. ಕೋರ್ಟ್ ಗೆ ಹೋಗಿ ವಾಪಸ್ ಬರುವಾಗ ಆರೋಪಿ ಗಿರೀಶ್ ಸ್ನೇಹಿತರನ್ನು ಸಂಪರ್ಕ ಮಾಡಿದ್ದ. ಇದಕ್ಕೆ ಜೊತೆಗಿದ್ದ ಪೊಲೀಸ್ ಸಿಬ್ಬಂದಿಗಳಾದ ಸಾಥ್ ನೀಡಿದ್ದರು.
ಕೊಲೆ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗಿರೀಶ್ ಹಾಗೂ ಪೋಕ್ಸೋ ಕೇಸ್ನಲ್ಲಿ ಜೈಲು ಪಾಲಾಗಿದ್ದ ರಾಮ್ ಭವನ್ನ್ನ ಕೋರ್ಟ್ಗೆ ಕರೆದುಕೊಂಡು ವಾಪಾಸ್ ಬರುವಾಗ ಪೊಲೀಸ್ ಸಿಬ್ಬಂದಿ ಉಮೇಶ್ ಎಂಬಾತ ಕೈದಿಗಳ ಜೊತೆ ಶಾಮೀಲಾಗಿದ್ದ. ಕೋರ್ಟ್ ಬಳಿ ಕೈದಿ ಗಿರೀಶ್ಗೆ ಆತನ ಸ್ನೇಹಿತರು ಮೊಬೈಲ್ ಹಾಗೂ ಮಾದಕ ವಸ್ತುಗಳನ್ನ ಕೊಟ್ಟರೇ, ಮತ್ತೋರ್ವ ಖೈದಿ ರಾಮ್ ಭವನ್ಗೆ ಆತನ ಪ್ರೇಯಸಿ ಮೊಬೈಲ್ ನೀಡಿದ್ದಳು. ಇನ್ನು ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಮುಂದುವರೆಸಿರುವ ಪರಪ್ಪನ ಅಗ್ರಹಾರ ಪೊಲೀಸರು, ಕೋರ್ಟ್ಗೆ ಹಾಜರಾಗಿದ್ದಾಗ ಕೈದಿಗಳಿಗೆ ಮೊಬೈಲ್, ಮಾದಕ ವಸ್ತು ನೀಡಿದ್ದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಹೊಸ ಡ್ರಗ್ ರಾಕೆಟ್ ಪತ್ತೆ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್
ಬೆಂಗಳೂರು: ಮಹಾನಗರದಲ್ಲಿ ಹೊಸ ಡ್ರಗ್ ರಾಕೆಟ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗುಲಾಂ ಸಿಂಗ್ನ್ನು ಪೊಲೀಸರು ಬಂಧಿಸಿದ್ದಾರೆ. ಮಾದಕವಸ್ತು ನೆನಸಿಟ್ಟು, ನೀರು ಸರಬರಾಜು ಮಾಡುತ್ತಿದ್ದ ಆರೋಪಿ. ರಾಜಸ್ಥಾನದಿಂದ ಮಾದಕವಸ್ತು ಒಪಿಎಂ, ಪಪ್ಪಿ ಎಂಬ ಹೊಸ ಮಾದರಿ ಡ್ರಗ್ಸ್ ತರಿಸುತ್ತಿದ್ದ. ಬಳಿಕ ಮಿಕ್ಸರ್ನಲ್ಲಿ ಒಪಿಎಂ, ಪಪ್ಪಿ ಎರಡನ್ನೂ ಪುಡಿ ಮಾಡಿ, ಪೌಡರ್ನ್ನು ಪುನಃ ನೀರಿಗೆ ಹಾಕಿ ನೆನಸಿಡುತ್ತಿದ್ದ. 1 ಲೀಟರ್ ಡ್ರಗ್ಸ್ ನೀರು 100 ಲೀಟರ್ ನೀರಿಗೆ ಬೆರೆಸಿ, ಆಯ್ದ ಪಾರ್ಟಿಗಳಲ್ಲಿ ನೀರಿನ ರೂಪದಲ್ಲೇ ಸರಬರಾಜು ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ್ದು, ಆರೋಪಿ ಬಳಿಯಿದ್ದ 55 ಕೆಜಿ ಡ್ರಗ್ಸ್ನ್ನು ಜಪ್ತಿ ಮಾಡಿದ್ದಾರೆ.