ಗೃಹಜ್ಯೋತಿ ಯೋಜನೆಗೆ ಅಭೂತಪೂರ್ವ ರೆಸ್ಪಾನ್ಸ್​​: ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದವರೆಷ್ಟು? ಇಲ್ಲಿದೆ ಅಂಕಿ-ಅಂಶ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಅಭೂತಪೂರ್ವ ಯಶಸ್ಸು ದೊರೆತಿದೆ. ಈ ಯಶಸ್ಸಿನ ಮೂಲಕ ಇಂಧನ ಇಲಾಖೆ ಹೊಸ ಮೈಲ್ಲಿಗಲ್ಲು ಸಾಧಿಸಿದೆ. ಅತ್ಯಂತ ವೇಗದಲ್ಲಿ ಗೃಹಜ್ಯೋತಿ ಯೋಜನೆ ರಾಜ್ಯದ ಜನರಿಗೆ ತಲುಪಲುತ್ತಿದ್ದು, ದಿನದಿಂದ ‌ದಿನಕ್ಕೆ ಅರ್ಜಿದಾರರ‌ ಸಂಖ್ಯೆ ‌ಏರಿಕೆ‌ಯಾಗುತ್ತಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಆರಂಭವಾಗಿ 17 ದಿನಗಳಲ್ಲಿ ಒಂದು ಕೋಟಿ ಜನ ನೋಂದಣಿ ಮಾಡಿದ್ದಾರೆ. ಒಟ್ಟು 100,20,163ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ.

ನಿನ್ನೆ (ಜು.05) ಹೆಚ್ಚಿನ ಪ್ರಮಾಣದಲ್ಲಿ ಅರ್ಜಿ ಸಲ್ಲಕೆಯಾಗಿದ್ದವು. ಆದರೆ‌‌ ಇಂದು (ಜು.06) ದ್ವಿಮುಖವಾಗುವ ಸಾಧ್ಯತೆ ಇದೆ. ನಿನ್ನೆ ರಾತ್ರಿ 10.15ರ ವೇಳೆಗೆ ಒಟ್ಟು 2.13.465 ಲಕ್ಷ ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು.

ಯಾವ ಯಾವ ಎಸ್ಕಾಂಗಳಲ್ಲಿ ಎಷ್ಟು ಅರ್ಜಿ ಸಲ್ಲಿಕೆ

  1. ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 41.14.567 ಲಕ್ಷ ಜನರಿಂದ ಅರ್ಜಿ ಸಲ್ಲಿಕೆ‌
  2. ಚೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 15.35.045 ಲಕ್ಷ ಜನರಿಂದ ಅರ್ಜಿ ಸಲ್ಲಿಕೆ
  3. ಜೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 10.54.359 ಲಕ್ಷ ಜನರಿಂದ ಅರ್ಜಿ ಸಲ್ಲಿಕೆ
  4. ಹೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 21.09.473ಲಕ್ಷ ಗ್ರಾಹಕರಿಂದ‌ ಅರ್ಜಿ ಸಲ್ಲಿಕೆ
  5. ಮೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 11.56 294ಲಕ್ಷ ಗ್ರಾಹಕರಿಂದ ಅರ್ಜಿ ಸಲ್ಲಿಕೆ
  6. HRECS ವ್ಯಾಪ್ತಿಯಲ್ಲಿ ಒಟ್ಟು 50.425ಸಾವಿರ ಜನರಿಂದ ಅರ್ಜಿ ಸಲ್ಲಿಕೆ

ಇನ್ನು ಒಟ್ಟು ರಾಜ್ಯಾದ್ಯಂತ 100.20163ಲಕ್ಷ ಗ್ರಾಹಕರು ಅರ್ಜಿ ಸಲ್ಲಿಸಿದ್ದಾರೆ. ತಿಂಗಳ ಅಂತ್ಯದ ವೇಳೆಗೆ 1.50 ಕೋಟಿ ಅರ್ಜಿ ನೊಂದಣಿ ಆಗುವ ಸಾದ್ಯತೆ ಇದೆ. ಇಂಧನ ಇಲಾಖೆ ಈಗಾಗಲೆ ಅರ್ಜಿ ಸಲ್ಲಿಕೆಗೆ ವೈಬ್​​​​ಸೈಟ್​​ ಸರಳೀಕರಣ ‌ಮಾಡಿದೆ. ಗೃಹಜ್ಯೋತಿ ಯೋಜನೆ ಜುಲೈ 1 ರಿಂದ ಅನ್ವಯವಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಜು.25 ಆಗಿದೆ. ಜು. 25 ರ ನಂತರ ಅರ್ಜಿ ಸಲ್ಲಿಸಿದರೇ ಆಗಸ್ಟ್​ ತಿಂಗಳ ಉಚಿತ ವಿದ್ಯುತ್  ಸೆಪ್ಟೆಂಬರ್ ತಿಂಗಳಿಗೆ ಸಿಗಲಿದೆ.