ಗೂಡ್ಸ್​ ರೈಲು ಮೈ ಮೇಲೆ ಹರಿದರೂ ಪವಾಡವೆಂಬಂತೆ ಬದುಕಿ ಬಂದ ಮಹಿಳೆ

ಗೂಡ್ಸ್​ ರೈಲೊಂದು ಮೈ ಮೇಲೆ ಹರಿದರೂ ಪವಾಡವೆಂಬಂತೆ ಮಹಿಳೆ ಬದುಕಿ ಬಂದಿದ್ದಾಳೆ. ಉತ್ತರ ಪ್ರದೇಶದ ಕಾಸ್​ಗಂಜ್​ನಲ್ಲಿ ಘಟನೆ ನಡೆದಿದೆ. ಹರ್​ಪ್ಯಾರಿ ಎನ್ನುವ ಆರ್ಯ ನಗರ ನಿವಾಸಿ ಔಷಧಿ ತರಲೆಂದು ಹೋಗುತ್ತಿದ್ದರು. ಸಹಾವರ್ ಗೇಟ್​ನಲ್ಲಿ ರೈಲ್ವೆ ಗ್ರೇಡ್-ಕ್ರಾಸಿಂಗ್ ಅನ್ನು ಹಾದು ಹೋಗುವಾಗ ರೈಲು ಬಂದಿದೆ ಭಯಗೊಂಡು ಹಳಿ ಮೇಲೆ ಬಿದ್ದಿದ್ದಾಳೆ. ಆದರೂ ಹೆಚ್ಚಿನ ಗಾಯಗಳಾಗದೆ ಪಾರಾಗಿದ್ದಾರೆ.

ಪಕ್ಕದಲ್ಲಿದ್ದವರ್ಯಾರು ಆಕೆಗೆ ಸಹಾಯ ಮಾಡಲು ಮುಂದೆ ಬರಲಿಲ್ಲ, ತಕ್ಷಣವೇ ಸರಕು ಸಾಗಣೆ ರೈಲನ್ನು ನಿಲ್ಲಿಸಲಾಯಿತು. ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗುವುದು ರೈಲ್ವೆ ನಿಯಮದಡಿ ಶಿಕ್ಷಾರ್ಹ ಅಪರಾಧ. ಇದರಡಿ 6 ತಿಂಗಳವರೆಗೆ ಜೈಲು ಶಿಕ್ಷೆ ಮತ್ತು 1 ಸಾವಿರ ರೂ.ವರೆಗೆ ದಂಡ ವಿಧಿಸಲಾಗುತ್ತದೆ.