ದಾಂಡೇಲಿ : ನಗರದ ಹಿರಿಯ ಸಮಾಜ ಸೇವಕರು ಹಾಗೂ 14 ನೇ ಬ್ಲಾಕಿನ ನಿವಾಸಿ ಮತ್ತು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ನಿವೃತ್ತ ಅಧಿಕಾರಿ ಪಾಂಡುರಂಗ ವೆಂಕಟೇಶ್ ಪೆಡ್ನೇಕರ್ ಅವರು ಅಲ್ಪಕಾಲದ ಅನಾರೋಗ್ಯದಿಂದ ವಿಧಿವಶರಾದರು. ಮೃತರಿಗೆ 76 ವರ್ಷ ವಯಸ್ಸಾಗಿತ್ತು.
ಸರಳ, ಸಜ್ಜನಿಕೆಯ ಪಾಂಡುರಂಗ ವೆಂಕಟೇಶ್ ಪೆಡ್ನೇಕರ್ ಅವರು ಶಿಸ್ತಿನ ವ್ಯಕ್ತಿತ್ವದವರಾಗಿದ್ದು, ಸಾಮಾಜಿಕ, ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ಸಕ್ರೀಯರಾಗಿ ಭಾಗವಹಿಸುತ್ತಿದ್ದರು. ಮೃತರು ಮಡದಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರನೇಕರು ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ.