ದಾಂಡೇಲಿ : ನಗರದ ಮಹಿಳೆಯರ ಪ್ರತಿಷ್ಠಿತ ಸಂಸ್ಥೆಯಾದ ಇನ್ನರ್ ವೀಲ್ ಕ್ಲಬ್ಬಿನ 2023 -24ನೇ ಸಾಲಿಗೆ ಅಧ್ಯಕ್ಷೆಯಾಗಿ ನ್ಯಾಯವಾದಿ ರೇಷ್ಮಾ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಪ್ರಧಾನ ಕಾರ್ಯದರ್ಶಿಯಾಗಿ ಯುವ ವೈದ್ಯೆ ಡಾ.ಭಾವನಾ ಅಂಕೋಲೆಕರ್ ಮತ್ತು ಖಜಾಂಚಿಯಾಗಿ ಜ್ಯೋತಿ ಕಲ್ಲಣ್ಣನವರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಕ್ಲಬಿನ ಐಎಸ್ಓ ಆಗಿ ಡಾ.ಜಹೇರಾ ಧಫೇದಾರ್ ಹಾಗೂ ಸಂಪಾದಕರಾಗಿ ರಾಜೇಶ್ವರಿ ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ. ನಿರ್ಗಮಿತ ಅಧ್ಯಕ್ಷೆ ನೇಹಾ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಜರುಗಿತು. 2023-24ನೇ ಸಾಲಿನಲ್ಲಿ ಇನ್ನರ್ ವೀಲ್ ಕ್ಲಬ್ ಹಲವಾರು ಸಮಾಜಮುಖಿ ಮತ್ತು ಜನಮುಖಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ ಎಂದು ನೂತನ ಅಧ್ಯಕ್ಷೆ ರೇಷ್ಮಾ ಕುಮಾರ್ ಅವರು ಶನಿವಾರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.