ಕೊಪ್ಪಳ ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಭ್ರೂಣ ಪತ್ತೆ! ಡಿಹೆಚ್​ಒ ವಿರುದ್ಧ ಸಚಿವ ತಂಗಡಗಿ ಗರಂ

ಕೊಪ್ಪಳ: ಜಿಲ್ಲಾಸ್ಪತ್ರೆಯ ಶೌಚಾಲಯದಲ್ಲಿ ಭ್ರೂಣ  ಪತ್ತೆಯಾಗಿರುವ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ  ಶಿವರಾಜ ತಂಗಡಗಿ, ಡಿಹೆಚ್​ಒ ಮತ್ತು ಕಿಮ್ಸ್ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು. ಜಿಲ್ಲಾಸ್ಪತ್ರೆಯ ಟಾಯ್ಲೆಟ್​ನಲ್ಲಿ ಭ್ರೂಣ ಪತ್ತೆಯಾಗುತ್ತದೆ ಅಂದರೆ ಅದಕ್ಕಿಂತ ಹೀನ ಸ್ಥಿತಿ ಬೇಕಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕೊಪ್ಪಳ ಜಿಲ್ಲಾಸ್ಪತ್ರೆಯ ಆಡಳಿತ ಕುಸಿದು ಹೋಗಿದೆ. ಜಿಲ್ಲಾಸ್ಪತ್ರೆಯ ಟಾಯ್ಲೆಟ್ ನಲ್ಲಿ ಭ್ರೂಣ ಪತ್ತೆಯಾಗುತ್ತೆ ಅಂದರೆ ಅದಕ್ಕಿಂತ ಹೀನ ಸ್ಥಿತಿ ಬೇಕಾ ಎಂದು ಡಿಹೆಚ್ಓ ಅಲಖಾನಂದ ಮಳಗಿ, ಕಿಮ್ಸ್ ನಿರ್ದೇಶಕ ವೈಜನಾಥ ಇಟಗಿ ವಿರುದ್ಧ ಆಕ್ರೋಶ ಹೊರಹಾಕಿದ ತಂಗಡಗಿ, ಜಿಲ್ಲಾ ಆಸ್ಪತ್ರೆಯ ಅದ್ವಾನದ ಬಗ್ಗೆ ಮಾಧ್ಯಮಲ್ಲಿ ಬರುತ್ತದೆ. ಸುಮ್ನೆ ಯಾಕೆ ನಮ್ಮ ಜಿಲ್ಲೆ ಮರಿಯಾದೆ ಹಾಳು ಮಾಡುತ್ತೀರಿ? ಒಂದು ಆಸ್ಪತ್ರೆಯನ್ನ ಸರಿಯಾಗಿ ನಡೆಸಲು ಆಗುದಿಲ್ಲವೇ ಎಂದು ಪ್ರಶ್ನಿಸಿದರು.

ಕೆಡಿಪಿ ಸಭೆಯಲ್ಲಿ ಟಿವಿ9 ವರದಿ ಪ್ರಸ್ತಾಪಿಸಿದ ಸಚಿವ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್, ನೀವು ಬಹಳ ನಿರ್ಲಕ್ಷ್ಯದಿಂದ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಬಗ್ಗೆ ಎಲ್ಲಾ ಗೊತ್ತು. ಟಾಯ್ಲೇನಲ್ಲಿ ಮಗು ಹೇಗೇ ಬಂತು? ಇದಕ್ಕೆ ಯಾರು ಹೊಣೆ, ಏನು ಕ್ರಮ ಕೈಗೊಂಡಿದ್ದರಿ ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೆ, ಜಿಲ್ಲೆಯಲ್ಲಿ ಕಲುಷಿತ ನೀರಿನ ಪ್ರಕರಣ ಆದಾಗಲು ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೊರಿದ್ದೀರಿ. ಇನ್ನೊಮ್ಮೆ ಹೀಗಾಗಬಾರದು ಎಂದು ತಂಗಡಗಿ ಸೂಚಿಸಿದರು.