ಮುನ್ಸಿಪಲ್ ಕಾರ್ಮಿಕರ ಸೇವೆಗಳ ಖಾಯಂಮಾತಿಗೆ ಆಗ್ರಹಿಸಿ ಮನವಿ ಸಲ್ಲಿಕೆ

ದಾಂಡೇಲಿ : ಮುನ್ಸಿಪಲ್ ಕಾರ್ಮಿಕರ ಸೇವೆಗಳ ಖಾಯಂಮಾತಿ ಮಾಡಬೇಕು ಮತ್ತು ಖಾಯಂಗೊಳಿಸುವ ತನಕ ನೇರ ಪಾವತಿಯಡಿಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಈ ಬಾರಿಯ ಬಜೆಟ್ ನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ಉಪ ತಹಶೀಲ್ದಾರ್ ರಾಘವೇಂದ್ರ ಪೂಜೇರಿಯವರ ಮೂಲಕ ಶುಕ್ರವಾರ ನೀಡಲಾಯ್ತು.

ಮನವಿಯಲ್ಲಿ ಮುನ್ಸಿಪಲ್ ಕಾರ್ಮಿಕರ ದಶಕಗಳಿಂದಿರುವ ಬಹುಮುಖ್ಯವಾದ ಬೇಡಿಕೆಯಾಗಿರುವ ಖಾಯಂಮಾತಿಯನ್ನು ಈಡೇರಿಸಬೇಕು ಮತ್ತು ಖಾಯಂ ಮಾಡುವವರೆಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲು ಈ ಬಾರಿಯ ಬಜೆಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದ್ದು, ಮುನ್ಸಿಪಲ್ ಕಾರ್ಮಿಕರ ವಿವಿಧ ಬೇಡಿಕೆಗಳೊಂದಿಗೆ, ವಿವಿಧ ಸಮಸ್ಯೆಗಳ ಬಗ್ಗೆಯು ಮನವಿಯಲ್ಲಿ ವಿವರಿಸಲಾಗಿದೆ.

ಈ ಸಂದರ್ಭದಲ್ಲಿ ಮುನ್ಸಿಪಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷರಾದ ಡಿ.ಸ್ಯಾಮಸನ್, ಉಪಾಧ್ಯಕ್ಷರಾದ ರಾಮಾಂಜನೇಯ, ಸಂಘಟನೆಯ ಪ್ರಮುಖರುಗಳಾದ ಕಾಂತರಾಜ್, ಜಾನ್ಸನ್ ಡಿಸೋಜಾ ಹಾಗೂ ಸಂಘಟನೆಯ ಪದಾಧಿಕಾರಿಗಳು, ಮುನ್ಸಿಪಲ್ ಕಾರ್ಮಿಕರು ಉಪಸ್ಥಿತರಿದ್ದರು.