ಭಟ್ಕಳ: ತಾಲೂಕಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಸುವiನ್ ಪೆನ್ನೇಕರ್ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ನಡೆಯಿತು. ಆರಂಭದಲ್ಲಿ ತಾಲೂಕಿನಲ್ಲಿನ ಪೋಲೀಸ್ ಇಲಾಖೆಗೆ ಸಂಬಂಧಿಸಿದ ಸಮಸ್ಯೆ ಹಾಗೂ ಸಲಹೆಗಳನ್ನು ತಿಳಿಸಲು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸೂಚಿಸಿದರು.
ಭಟ್ಕಳದಲ್ಲಿ ದಿನದಿಂದ ದಿನಕ್ಕೆ ವಾಹನದ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕಾಗಿ ಭಟ್ಕಳದಲ್ಲಿ ಟ್ರಾಫಿಕ್ ಠಾಣೆ ತೆರೆಯಬೇಕೆಂಬ ಶಾಂತಾರಾಮ ಭಟ್ಕಳ ಬೇಡಿಕೆ ಇಟ್ಟರು. ಇನ್ನು ವಾರದಲ್ಲಿ ಮೂರು ಬಾರಿ ವಾಹನ ತಪಾಸಣೆ ಮಾಡುತ್ತಿದ್ದಾರೆ. ಕೋವಿಡ್ ಬಳಿಕ ವ್ಯಾಪಾರ ಸುಧಾರಣೆಯಾಗುತ್ತಿದ್ದು ಚಿಕ್ಕ ಪುಟ್ಟ ವ್ಯಾಪಾರಸ್ಥರಿಗೆ ಇದರಿಂದ ಸಮಸ್ಯೆಯಾಗುತ್ತಿದೆ ಎಂದು ಇರ್ಷಾಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಮನವಿ ಮಾಡಿದರು.
ಮೊದಲಿನ ಹಾಗೇ ಎಲ್ಲಾ ವಾರ್ಡ್ ಗಳಲ್ಲಿ ಪೊಲೀಸ ಬೀಟ್ ಸಭೆ ನಡೆಸಬೇಕು. ಇದರಿಂದ ಪೊಲೀಸರು ಹಾಗೂ ಸಾರ್ವಜನಿಕ ನಡುವೆ ಒಳ್ಳೆ ಬಾಂದ್ಯವ ಬೆಳೆಯುತ್ತದೆ ಎಂದು ಎಸ್.ಎಂ ಪರ್ವೇಜ್ ಹೇಳಿದರು. ಭಟ್ಕಳದಲ್ಲಿ ಇನ್ನು ಕೆ.ಎಸ್.ಆರ್.ಪಿ ಕಛೇರಿ ತೆರೆದಿಲ್ಲ. ಆದಷ್ಟು ಬೇಗ ಭಟ್ಕಳದಲ್ಲಿ ಒಂದು ಕೆ.ಎಸ್.ಆರ್.ಪಿ ಕಛೇರಿ ತೆರೆಯುವಂತೆ ಹೇಳಿದರು.
ನಂತರ ಮಾತನಾಡಿದ ಉಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ ಮುಂದಿನ ದಿನಗಳಲ್ಲಿ ಠಾಣಾ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ನಡೆಸುವ ಬಗ್ಗೆ ಚಿಂತನೆ ಮಾಡುತ್ತೇವೆ ಎಂದರು ಸಭೆಯಲ್ಲಿ ಚರ್ಚೆಯಾದ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದರು
ಕೊನೆಯಲ್ಲಿ ಸಾರ್ವಜನಿಕ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೆಕರ್ ಸಭೆಯಲ್ಲಿ ಚರ್ಚೆಯಾದ ಸಮಸ್ಯೆಗೆ ಪರಿಹರಿಸುವ ನಿಟ್ಟಿನಲ್ಲಿ ಸ್ಪಂದಿಸಿದರೆ ಜನಸಾಮಾನ್ಯರಿಗೆ ಪೊಲೀಸರ ಮೇಲೆ ನಂಬಿಕೆ ಮತ್ತು ವಿಶ್ವಾಸ ಬರಲಿದೆ. ವ್ಯವಸ್ಥೆಯ ಒಳಗೆ ಜನಸಾಮಾನ್ಯರನ್ನು ಕರೆ ತಂದು ಅದಕ್ಕೊಂದು ಸೂಕ್ತ ಪರಿಹಾರ ನೀಡುವುದರಿಂದ ವ್ಯವಸ್ಥೆ ಬದಲಾವಣೆ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ನಗರ ಠಾಣಾ ಸಿಪಿಐ ದಿವಾಕರ, ಗ್ರಾಮೀಣ ಠಾಣೆ ಸಿಪಿಐ ಮಹಾಬಲೇಶ್ವರ ನಾಯ್ಕ ಸೇರಿದಂತೆ ಅನೇಕರು ಹಾಜರಿದ್ದರು.