ಯಲ್ಲಾಪುರ: ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಆಶಾಢ ಏಕಾದಶಿಯ ಪ್ರಯುಕ್ತ ಮಂಜುನಾಥ ಭಟ್ಟ ದೇವದಮನೆ ತಂಡದಿಂದ ರಾಮ ನಿರ್ಯಾಣ ಯಕ್ಷಗಾನ ತಾಳಮದ್ದಲೆ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರ, ಮಂಜುನಾಥ ಭಟ್ಟ ದೇವದಮನೆ, ಮದ್ದಲೆವಾದಕರಾಗಿ ಕೃಷ್ಣ ಹೆಗಡೆ ಜೋಗದಮನೆ ಭಾಗವಹಿಸಿದ್ದರು.
ರಾಮನಾಗಿ ಡಾ.ಮಹೇಶ ಭಟ್ಟ ಇಡಗುಂದಿ, ಲಕ್ಷ್ಮಣನಾಗಿ ಡಾ.ಶಿವರಾಮ ಭಾಗ್ವತ ಮಣ್ಕುಳಿ, ಊರ್ಮಿಳೆಯಾಗಿ ವೇ.ನಾರಾಯಣ ಭಟ್ಟ ಮೊಟ್ಟೆಗದ್ದೆ, ಕಾಲಪುರುಷನಾಗಿ ನರಸಿಂಹ ಭಟ್ಟ ಕುಂಕಿಮನೆ, ದುರ್ವಾಸನಾಗಿ ನಾಗರಾಜ ಭಟ್ಟ ಕುಂಕಿಪಾಲ, ಹನುಮಂತನಾಗಿ ಶ್ರೀಧರ ಅಣಲಗಾರ ಪಾತ್ರಚಿತ್ರಣ ನೀಡಿದರು. ಸಂಘಟಕ ನರಸಿಂಹ ಭಟ್ಟ ದೇವದಮನೆ ಕಲಾವಿದರನ್ನು ಗೌರವಿಸಿದರು.