ಹಳಿಯಾಳ : ಶ್ರೀ ಶ್ರೀ ಶ್ರೀ108 ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ .ಶ್ರೀಶೈಲ ಜಗದ್ಗುರು ಮಹಾಸ್ವಾಮೀಜಿಯವರಿಂದ ಜೋಯಿಡಾ ತಾಲ್ಲೂಕಿನ ಕುಂಬಾರವಾಡಾದಲ್ಲಿ ನಡೆಯಲಿರುವ ಅನುಷ್ಠಾನ ಮಾಡುವ ಕಾರ್ಯಕ್ರಮದ ಕುರಿತಂತೆ ಹಳಿಯಾಳ ಪಟ್ಟಣದ ಜವಳಿಗಲ್ಲಿಯಲ್ಲಿರುವ ಶ್ರೀ ವಿರಕ್ತಮಠದಲ್ಲಿ ಉತ್ತರ ಕನ್ನಡ ಜಿಲ್ಲೆಯ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷರಾದ ಉದಯ ಹೂಲಿಯವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯು ಜರುಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉದಯ ಹೂಲಿಯವರು ಜೋಯಿಡಾ ತಾಲೂಕಿನ ಕುಂಬಾರವಾಡದಲ್ಲಿ ಪರಮಪೂಜ್ಯ ಶ್ರೀಶೈಲ ಜಗದ್ಗುರು ಮಹಾಸ್ವಾಮಿಜಿಯವರು ಹಮ್ಮಿಕೊಂಡಿರುವ ಅನುಷ್ಠಾನ ಕಾರ್ಯಕ್ರಮದ ಯಶಸ್ಸಿಗೆ ಸಮಾಜ ಬಾಂಧವರು ಶ್ರದ್ಧಾಭಕ್ತಿಯಿಂದ ಶ್ರಮಿಸಬೇಕೆಂದು ಕರೆ ನೀಡಿದರು.
ಈ ಸಭೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಯು.ಎಸ್. ಪಾಟೀಲ್, ಹಳಿಯಾಳ ತಾಲೂಕು ಘಟಕದ ಅಧ್ಯಕ್ಷರಾದ ಎಂ.ಬಿ.ತೊರಣಗಟ್ಟಿ, ಶರಣ ಸಾಹಿತ್ಯ
ಪರಿಷತ್ ಜಿಲ್ಲಾಧ್ಯಕ್ಷರಾದ ಶಿವ ದೇಸಾಯಿಸ್ವಾಮಿ, ಸಮಾಜದ ಪ್ರಮುಖರುಗಳಾದ ಡಾ.ಶೇಖರ ಹಂಚಿನಾಳಮಠ, ಶಂಕರ ಜಡೆ ಹೀರೆಮಠ, ಉಮೇಶ ಬೋಳಶೆಟ್ಟಿ, ರವಿ ತೊರಣಗಟ್ಟಿ, ವನಮಾಲಾ ಗೌಡರ , ಲಿಂಗರಾಜ ಹೀರೆಮಠ, ಅಪ್ಪು ಚರಂತಿಮಠ,ಹಾಗೂ 100 ಹೆಚ್ಚು ಸಮಾಜದ ಬಾಂಧವರು ಬಾಗವಹಿಸಿ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ ಸಭೆಯನ್ನು ಯಶಸ್ವಿ ಗೊಳಿಸಿದರು.