ಕಾರವಾರ: ಪುತ್ರ ಮತ್ತು ಪತ್ನಿಯನ್ನು ನದಿಗೆ ತಳ್ಳಿ ಉದ್ಯಮಿ ಆತ್ಮಹತ್ಯೆ ಗೆ ಶರಣಾಗಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾರವಾರದ ಗೋಪಶಿಟ್ಟಾ ಮೂಲದ ಶ್ಯಾಮ್ ಪಾಟೀಲ್(40), ಜ್ಯೋತಿ ಪಾಟೀಲ್(35), ದಕ್ಷ(12) ಮೃತ ದುರ್ದೈವಿಗಳು. ಗೋವಾದ ಕುಕ್ಕಳ್ಳಿಯಲ್ಲಿ ವಾಸವಿದ್ದರು. ಸಾಲಬಾಧೆಯಿಂದ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರವಾರ ಕಾಳಿ ನದಿ ಬ್ರಿಜ್ನಿಂದ ಪತ್ನಿ, ಮಗನನ್ನು ದೂಡಿದ್ದಾರೆ ಎನ್ನಲಾಗುತ್ತಿದ್ದು, ಸದ್ಯ ದೇವಭಾಗ ಕಡಲ ತೀರದಲ್ಲಿ ಜ್ಯೋತಿ ಹಾಗೂ ದಕ್ಷನ ಶವ ಪತ್ತೆಯಾಗಿದೆ.
ಉದ್ಯಮಿ ಶ್ಯಾಮ ಪಾಟೀಲ್ ದೇಹ ಗೋವಾದ ಕುಕಳ್ಳಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗೋವಾ ವೆರ್ನಾದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ಹೊಂದಿದ್ದರು. ಚಿತ್ತಾಕುಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.