ಚುರುಕುಗೊಂಡ ಮುಂಗಾರು. ಕುಮಟಾದಲ್ಲಿ ಭಾರೀ ಮಳೆ

ಕುಮಟಾ : ಇದೀಗ ಮುಂಗಾರು ಚುರುಕುಗೊಂಡಿದ್ದು, ಉತ್ತರಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ನಿನ್ನೆ ತಡರಾತ್ರಿಯಿಂದಲೂ ಕುಮಟಾ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದೆ.
ಇಂದು ಬೆಳಿಗ್ಗೆ ಕಂಡುಬಂದ ದೃಶ್ಯದಲ್ಲಿ ರಾತ್ರಿಯಿಂದ ಸುರಿಯುತ್ತಿರುವ ಮಳೆ ಬೆಳಿಗ್ಗೆಯೂ ಮುಂದುವರೆದಿದ್ದು, ಜನಸಂಚಾರ ಅಸ್ತವ್ಯಸ್ತಗೊಂಡಿದೆ. ಕುಮಟಾ ಹೊಸ ಬಸ್ ನಿಲ್ದಾಣದ ಸುತ್ತಮುತ್ತ ನೀರು ತುಂಬಿ ಪ್ರಯಾಣಿಕರು ಓಡಾಡಲು ಪರದಾಡುವಂತಾಯಿತು. ಜೊತೆಗೆ ಅಲ್ಲಲ್ಲಿ ವಾಹನ ಸಂಚಾರಕ್ಕೂ ತೊಂದರೆಯಾಗಿದ್ದು ಬಿಟ್ಟರೆ ಎಲ್ಲೂ ಗಂಭೀರ ತೊಂದರೆಯಾದ ಕುರಿತು ವರದಿಯಾಗಿಲ್ಲ.. ಸದ್ಯದ ಪರಿಸ್ಥಿತಿ ನೋಡುತ್ತಿದ್ದರೆ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಮಳೆ ಮುಂದುವರಿಯಲಿದ್ದು, ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ..