ಪ್ರವಾಸಿಗರ ಆಕರ್ಷಣೆಯ ಪ್ರವಾಸಿ ತಾಣವಾಗುತ್ತಿರುವ ದಾಂಡೇಲಿಯ ಮೊಸಳೆ ಪಾರ್ಕ್

ದಾಂಡೇಲಿ : ನಗರದ ಪ್ರವಾಸೋದ್ಯಮ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿರುವ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಕೇರವಾಡದಲ್ಲಿರುವ ಮೊಸಳೆ ಪಾರ್ಕ್ ಪ್ರವಾಸಿಗರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.

ಕಾಳಿ ನದಿಯ ಸುಂದರ ವಿಹಂಗಮ ತಟದಲ್ಲಿ ತಲೆಯೆತ್ತಿರುವ ಮೊಸಳೆ ಪಾರ್ಕನ್ನು ನೋಡಲು ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಸುಂದರವಾದ ಉದ್ಯಾನವನ ಹಾಗೂ ಸುರಕ್ಷಿತವಾಗಿ ನಿಂತುಕೊಂಡು ಮೊಸಳೆಗಳನ್ನು ವೀಕ್ಷಿಸಲು ಮಾಡಿದ ಕಾರಿಡಾರ್ ವ್ಯವಸ್ಥೆ ಅತ್ಯುತ್ತಮವಾಗಿದ್ದು, ಪ್ರವಾಸಿಗರ ಗಮನ ಸೆಳೆಯುತ್ತಿದೆ. ವೀಕೆಂಡ್ ದಿನಗಳಲ್ಲಂತೂ ಹೆಚ್ಚಿನ ಸಂಖ್ಯೆಯಲ್ಲಿ ದೂರದೂರುಗಳಿಂದ ಪ್ರವಾಸಿಗರು ಇಲ್ಲಿಗೆ ಬರುವುದು ಇಲ್ಲಿಯ ವಾಡಿಕೆಯಾಗಿ ಬೆಳೆದು ಬಿಟ್ಟಿದೆ.