ನೂರರ ಗಡಿ ದಾಟಿದ ಟೊಮೆಟೋ ಬೆಲೆ- ಗೃಹಿಣಿಯರ ಆಕ್ರೋಶ

ಬೆಂಗಳೂರು/ನವದೆಹಲಿ: ದಿನನಿತ್ಯ ತಮ್ಮ ಅಡುಗೆಯಲ್ಲಿ ಬಳಸುವ ಟೊಮೆಟೋ ದರ ಗಗನಕ್ಕೇರಿದು, ಗೃಹಿಣಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಸೇರಿದಂತೆ ಬೆಂಗಳೂರು ಸುತ್ತಮುತ್ತ ಭಾಗಗಳಲ್ಲಿ ಟೊಮೆಟೋ ಬೆಳೆ ನಾಶವಾಗಿದೆ. ಹೀಗಾಗಿ ದರದಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ. ಒಂದು ಕೆ.ಜಿ ಟೊಮೆಟೋಗೆ ಹಾಪ್ ಕಾಮ್ಸ್ ನಲ್ಲಿ 110 ರೂ., ಆನ್ ಲೈನ್ ಶಾಪಿಂಗ್ ನಲ್ಲಿ 120 ರೂ. ಆಗಿದೆ. ಹೀಗಾಗಿ ಟೊಮೆಟೋ ಸಾರು, ರಸಂ, ಗೊಜ್ಜು, ಹುಳಿ ಮಾಡೋಕೆ ಆಗಲ್ಲ ಅಂತಾ ಗೃಹಿಣಿಯರು ಆಕ್ರೋಶ ಹೊರಹಾಕುತ್ತಿದ್ದಾರೆ.

ಉತ್ಪಾದನೆ ಕೊರತೆ, ತೀವ್ರವಾದ ಬಿಸಿಲು ಮತ್ತು ಮುಂಗಾರು ಆಗಮನ ವಿಳಂಬವಾಗಿದ್ದರಿಂದ ಟೊಮೆಟೋ ದರದಲ್ಲಿ ಏರಿಕೆಯಾಗಿದೆ ಎಂದು ರೈತರು ತಿಳಿಸಿದ್ದಾರೆ. ಉತ್ತರ ಪ್ರದೇಶ ಮತ್ತು ಹರಿಯಾಣದಂತಹ ನೆರೆಯ ರಾಜ್ಯಗಳಿಂದ ಪೂರೈಕೆ ಕಡಿಮೆಯಾದ ಕಾರಣ ದೆಹಲಿಯಲ್ಲಿ ಕಳೆದೆರಡು ದಿನಗಳಲ್ಲಿ ಟೊಮೆಟೋ ಬೆಲೆ ದ್ವಿಗುಣಗೊಂಡಿದೆ ಎಂಬುದಾಗಿಯೂ ವರದಿಯಾಗಿದೆ.