ಯುವಜನಾಂಗದ ಭವಿಷ್ಯದ ಮೇಲೆ ಪರಿಣಾಮ ಬೀರುತ್ತಿರುವ ಮಾದಕ ದ್ರವ್ಯ ಸೇವನೆ : ಡಿ.ವೈ.ಎಸ್.ಪಿ. ಶಿವಾನಂದ ಕಟಗಿ

ದಾಂಡೇಲಿ : ಜಗತ್ತಿನಲ್ಲಿ ನೂರಕ್ಕೆ ಹದಿನೇಳರಷ್ಟು ಯುವಕ, ಯುವತಿಯರು ಮಾದಕ ದ್ರವ್ಯ ಸೇವನೆಗೆ ಬಲಿಯಾಗುತ್ತಿದ್ದು, ಇದರಿಂದಾಗಿ ಅವರ ವೈಯಕ್ತಿಕ ಸಾಮಾಜಿಕ ಬದುಕಿಗೆ ಧಕ್ಕೆಯಾಗುತ್ತಿದೆ. ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗಿ ಯುವಜನಾಂಗ ತಮ್ಮ ಬದುಕನ್ನು ಕಟ್ಟಿಕೊಳ್ಳದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದೆ. ಯುವಕರು ದೇಶದ ಭವಿಷ್ಯದ ದೃಷ್ಟಿಯಿಂದ ವ್ಯಸನ ಮುಕ್ತರಾಗಬೇಕಿದೆ ಎಂದು ಡಿ.ವೈ.ಎಸ್.ಪಿ. ಶಿವಾನಂದ ಕಟಗಿಯವರು ಅಭಿಪ್ರಾಯಪಟ್ಟರು.

ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಹಾಗೂ ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಗೆ ಚಾಲನೆಯನ್ನು ನೀಡಿ ಮಾತನಾಡುತ್ತಿದ್ದರು. ಕ್ಷಣಿಕ ಸುಖಕ್ಕಾಗಿ ಶಾಶ್ವತವಾದ ಸುಖದಿಂದ ವಂಚಿತರಾಗಬಾರದೆಂದು ಕರೆ ನೀಡಿದರು. ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಂ.ಡಿ.ಒಕ್ಕುಂದ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸಿ.ಪಿ.ಐ ಬಿ.ಎಸ್.ಲೋಕಾಪುರ, ಹಿರಿಯ ಪ್ರಾಧ್ಯಾಪಕರಾದ ಎಸ್.ವಿ.ಚಿಂಚಣಿ, ಪಿ.ಎಸ್.ಐಗಳಾದ ಐ.ಆರ್ ಗಡ್ಡೇಕರ, ಯಲ್ಲಪ್ಪಾ ಎಸ್, ಕೃಷ್ಣಗೌಡ ಅರಕೇರಿ ಮೊದಲಾದವರು ಭಾಗವಹಿಸಿದ್ದರು. ಉಪಸ್ಥಿತರಿದ್ದರು.