ಕಾನೂನುಗಳನ್ನು ಮಾಡುವುದು ನಮ್ಮ ರಕ್ಷಣೆಗೆ ಹೊರತು, ಅದು ನಮಗೆ ಹಿಂಸೆ ನೀಡಲು ಅಲ್ಲ. ಅಂತಹಃ ಕೆಟ್ಟ ಕಾನೂನುಗಳನ್ನು ನಾವು ಒಪ್ಪುವುದಿಲ್ಲ. ಆದರೆ ಅದು ನಮಗೆ ರಕ್ಷಣೆ ನೀಡುತ್ತದೆ. ನಮಗೆ ಅದು ಒಳ್ಳೆಯದ್ದನ್ನು ಮಾಡುತ್ತದೆ ಎಂದಾಗ ಅದನ್ನು ನಾವು ಪಾಲಿಸುವುದು ನಮ್ಮ ಕರ್ತವ್ಯ, ಜತೆಗೆ ಇದು ಪ್ರಜಾಪ್ರಭುತ್ವ ರಾಷ್ಟ್ರ ಎಲ್ಲರೂ ಈ ದೇಶದ ಕಾನೂನುಗಳನ್ನು ಪಾಲಿಸಲೇಬೇಕು. ಆದರೆ ಇಲ್ಲೊಬ್ಬ ವ್ಯಕ್ತಿ ರಸ್ತೆ ಸುರಕ್ಷತಾ ನಿಯಮ ಉಲ್ಲಂಘನೆ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದೆ. ಒಂದು ಸ್ಕೂಟರ್‌ನಲ್ಲಿ 7 ಜನರು ಕೂರಿಸಿಕೊಂಡು ಹೋಗಿರುವುದು, ರಸ್ತೆ ಸುರಕ್ಷತಾ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಮುಂಬೈನಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮಾಡಿ ವ್ಯಕ್ತಿಯೊಬ್ಬರು ಏಳು ಮಕ್ಕಳನ್ನು ತನ್ನ ಸ್ಕೂಟರ್‌ನಲ್ಲಿ ಸಾಗಿಸುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.ಈ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ತನ್ನ ಸ್ಕೂಟರ್‌ನಲ್ಲಿ ಇಬ್ಬರು ಮಕ್ಕಳನ್ನು ಸ್ಕೂಟರ್ನ ಮುಂಭಾಗದಲ್ಲಿ ಇತರ ಮೂವರು ಮಕ್ಕಳು ಸೀಟಿನಲ್ಲಿ ಕುಳಿತಿದ್ದಾರೆ ಮತ್ತು ಇಬ್ಬರು ಹಿಂದೆ ನಿಂತಿದ್ದಾರೆ.
ಇದು ಬೇಜವಾಬ್ದಾರಿತನ ಮತ್ತು ಹುಚ್ಚುತನ, ಏಳು ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಿರುವ ಈ ವ್ಯಕ್ತಿಗೆ ಬುದ್ದಿ ಇಲ್ಲವೆ. ಆ ಏಳು ಪುಟ್ಟ ಮಕ್ಕಳ ಪ್ರಾಣಕ್ಕೆ ಅಪಾಯ ತಂದಿರುವ ಅವರನ್ನು ಕೂಡಲೇ ಬಂಧಿಸಬೇಕು. ಈ ಮಕ್ಕಳ ಪೋಷಕರ ಮೇಲೂ ಕಾನೂನು ಕ್ರಮ ಜರುಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ಮುಂಬೈ ಟ್ರಾಫಿಕ್ ಪೊಲೀಸರು ಮಕ್ಕಳು ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು ಮಾಡಿದ್ದಕ್ಕಾಗಿ ಈ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 308 (ಅಪರಾಧೀಯ ನರಹತ್ಯೆ ಮಾಡುವ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಲ್ಲಿ ನಿಯಮದ ಉಲ್ಲಂಘನೆ ಆಗಿರುವುದು ನಿಜ, ಇದು ಸರಿಯಾದ ಸವಾರಿ ಅಲ್ಲ. ಇಂತಹ ಕೃತ್ಯ ಮಕ್ಕಳಿಗೂ, ಸಾರ್ವಜನಿಕರ ಪ್ರಾಣಕ್ಕೂ ಅಪಾಯ ಎಂದು ಹೇಳಿದ್ದಾರೆ. ಆರೋಪಿ ಸವಾರನ ವಿರುದ್ಧ ನರಹತ್ಯೆ ಮಾಡಲು ಯತ್ನಿಸಿದ ಗಂಭೀರ ಅಪರಾಧ u/sec 308 IPC ಅಡಿಯಲ್ಲಿ ದೂರು ದಾಖಲಿಸಲಾಗಿದೆ.