ಕೈ ಹಿಡಿದು ಎಳೆದ ರೋಡ್ ರೋಮಿಯೋಗೆ ಬಿತ್ತು ಗೂಸಾ, ಈ ಯುವತಿಯರ ಧೈರ್ಯಕ್ಕೆ ಮೆಚ್ಚಲೇಬೇಕು ಎಂದ ನೆಟ್ಟಿಗರು

ಅಹಮದಾಬಾದ್: ಪ್ರತಿಯೊಬ್ಬ ಹೆಣ್ಣು ಕೂಡ ತ್ಯಾಗ, ಸೇವೆ, ವಾತ್ಸಲ್ಯದಿಂದ ಇರುತ್ತಾಳೆ, ಆದರೆ ತನ್ನ ತಂಟೆಗೆ ಬಂದರೆ ಮಾತ್ರ ಮಹಾಕಾಳಿ ಆಗುತ್ತಾಳೆ. ಹಿರಿಯರು ಹೇಳಿರುವಂತೆ ಹೆಣ್ಣಿನ ತಾಳ್ಮೆ ಅವಳ ದೌರ್ಬಲ್ಯತೆ ಅಲ್ಲ, ಅವಳಲ್ಲಿಯು ಒಂದು ಕಾಳಿ ಶಕ್ತಿ ಇರುತ್ತದೆ ಎಂದು. ಇದೀಗ ಅದಕ್ಕೆ ಸಾಕ್ಷಿ ಈ ಸಹೋದರಿಯರ ವೀಡಿಯೊ. ತನ್ನ ಕೈ ಹಿಡಿದು ಎಳೆದ ರೋಡ್ ರೋಮಿಯೋಗೆ ಸರಿಯಾಗಿ ಬಿದ್ದಿದೆ ಗೂಸಾ, ಇದೀಗ ಈ ವೀಡಿಯೊ ಎಲ್ಲ ಕಡೆ ವೈರಲ್ ಆಗಿದೆ. ಪ್ರತಿದಿನ ತನ್ನ ದಾರಿಗೆ ಅಡ್ಡ ನಿಂತು ಕಿರುಕುಳ ನೀಡುತ್ತಿದ್ದ ವ್ಯಕ್ತಿಗೆ 17 ವರ್ಷದ ಒಡಿಶಾದ ಬೆಹ್ರಾಂಪುರದ ಯುವತಿಯೂ ಸಹೋದರಿಯ ಸಹಾಯದಿಂದ ಸಾರ್ವಜನಿಕವಾಗಿ ಥಳಿಸಿದ್ದಾಳೆ. ಈ ವೀಡಿಯೊ ಅಹಮದಾಬಾದ್‌ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ವೈರಲ್ ಆಗಿರುವ ವೀಡಿಯೊದಲ್ಲಿ ಆರೋಪಿಯು ನೆಲದ ಮೇಲೆ ಮಲಗಿರುವುದನ್ನು ಕಾಣಬಹುದು, ಇದರಲ್ಲಿ ಒಬ್ಬ ಹುಡುಗಿ ಅವನನ್ನು ಥಳಿಸಿದರೆ, ಆಕೆಯ ಸಹೋದರಿ, ಆತನ ದಾರಿಯಲ್ಲಿ ಹೋಗುವಾಗ ಕಿರುಕುಳ ನೀಡುತ್ತಿದ್ದ ಎಂದು ಸಾರ್ವಜನಿಕವಾಗಿ ಆಕ್ರೋಶಭರಿತವಾಗಿ ವಿವರಿಸುವುದನ್ನು ನೋಡಿಬಹುದು.

ವರದಿಗಳ ಪ್ರಕಾರ, ಶುಕ್ರವಾರ ಬೆಳಗ್ಗೆ ಈತ ಬಾಲಕಿಯನ್ನು ದಾರಿಯಲ್ಲಿ ತಡೆದು ಆಕೆಯ ಕೈ ಹಿಡಿದಿದ್ದಾನೆ. ಸಮೀಪದಲ್ಲಿ ಕಾಯುತ್ತಿದ್ದ ಹುಡುಗಿಯ ಅಕ್ಕ ಘಟನೆಯ ಸ್ಥಳಕ್ಕೆ ಬಂದು ವ್ಯಕ್ತಿಗೆ ಥಳಿಸಿದ್ದಾರೆ. ನಂತರ ಅಲ್ಲಿಯೇ ಇದ್ದ ಇತರ ವಿದ್ಯಾರ್ಥಿಗಳು ಆಕೆಯ ಸಹಾಯಕ್ಕೆ ಬಂದಿದ್ದಾರೆ.

ಬಾಲಕಿಯರು ನೀಡಿದ ದೂರಿನ ಪ್ರಕಾರ, ಈ ಘಟನೆಯ ನಂತರ ಬಾಲಕಿಯರ ಮನೆಗೆ ಶಾಲೆಯಿಂದ ಪೋನ್ ಮಾಡಿದ್ದಾರೆ, ನಿಮ್ಮ ಕಿರಿಯ ಮಗಳನ್ನು ಹಿಂಬಾಲಿಸುತ್ತಿದ್ದ ವ್ಯಕ್ತಿಯನ್ನು ನಿಮ್ಮ ಮಕ್ಕಳು ಹೊಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ 6:45ಕ್ಕೆ ನನ್ನ ಕಿರಿಯ ಮಗಳು ಸೈಕಲ್​​​ನಲ್ಲಿ ಶಾಲೆಗೆ ಹೋಗುತ್ತಿದ್ದಾಗ ವಿಜಯ್ ಸರ್ಕಾಟೆ ಎಂಬ ವ್ಯಕ್ತಿ ಬಲವಂತವಾಗಿ ಆಕೆಯ ಕೈ ಹಿಡಿದು ಗಿಫ್ಟ್​​ ನೀಡಲು ಹೋಗಿದ್ದಾನೆ, ಆಕೆ ಅದನ್ನು ಸ್ವೀಕರಿಸಲು ನಿರಕಾರಿಸಿದಾಗ, ಗಿಫ್ಟ್​ನ್ನು ಆಕೆಯ ಬ್ಯಾಗ್​​​ನಲ್ಲಿ ಹಾಕಿ, ಬಲವಂತವಾಗಿ ಆಕೆಗೆ ಮುತ್ತಿಟ್ಟು ಕಿರುಕುಳ ನೀಡಿದ್ದಾನೆ, ನನ್ನ ಮಗಳು ಮನೆಗೆ ಬರುವಾಗ ಅಳುತ್ತ ಬಂದಿದ್ದಾಳೆ ಎಂದು ಬಾಲಕಿಯರ ತಾಯಿ ವಿವರಿಸಿದ್ದಾರೆ.