ಜೋಯಿಡಾ : ಜೋಯಿಡಾ ತಾಲ್ಲೂಕು ಕೇಂದ್ರದಲ್ಲಿರುವ ಕುಣಬಿ ಭವನದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆಯವರ ನೇತೃತ್ವದಲ್ಲಿ ಅಹವಾಲು ಸ್ವೀಕರಿಸುವ ಸಭೆಯನ್ನು ಏರ್ಪಡಿಸಲಾಗಿತ್ತು.
ಹಿಂದುಳಿದ ವರ್ಗಗಳಿಗೆ ಕಾರ್ಯಕ್ರಮಗಳ ಅನುಷ್ಟಾನ ಹಾಗೂ ವಿವಿದ ಸಮುದಾಯದ ಅಹವಾಲನ್ನು ಈ ಸಂದರ್ಭದಲ್ಲಿ ಜಯಪ್ರಕಾಶ್ ಹೆಗ್ಡೆಯವರು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಕ್ಷತ್ರೀಯ ಮರಾಠಾ ಪರಿಷತ್ ರಾಮನಗರ-ಜೋಯಿಡಾ ಇವರ ವತಿಯಿಂದ ಮರಾಠಾ ಸಮುದಾಯದ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಮರಾಠಾ ಸಮುದಾಯದ ಮುಖಂಡರು ಹಾಗೂ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ ದೇಸಾಯಿಯವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ವಿನಯ ದೇಸಾಯಿ, ದೇವಿದಾಸ ದೇಸಾಯಿ, ವಿಲಾಸ ದೇಸಾಯಿ ಮಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗೋಮಾಂತಕ ಸಮಾಜ ಸೇವಾ ಸಂಘದ ಸಂಚಾಲಕರಾದ ದೇವದಾಸ್ ಶೇಜವಾಡಕರ್ ಹಾಗೂ ಸಮಾಜದ ಪ್ರಮುಖರುಗಳಾದ ರಮೇಶ್ ನಾಯ್ಕ, ದಶರಥ ನಾಯ್ಕ, ಮಿಲಿಂದ್ ಕೋಡ್ಕಣಿ, ಸಂತೋಷ್ ಬಾಂದೇಕರ್, ರವಿ ಬಾಂದೇಕರ್ ಅವರು ಕೆ.ಜಯಪ್ರಕಾಶ್ ಹೆಗ್ಡೆಯವರಿಗೆ ಗೋಮಾಮಂತಕ ಸಮಾಜದ ಅಭಿವೃದ್ಧಿಗೆ ವಿಶೇಷ ಆಧ್ಯತೆ ಮತ್ತು ಯೋಗ್ಯ ಯೋಜನೆಗಳನ್ನು ಅನುಷ್ಟಾನ ಪಡಿಸಬೇಕೆಂದು ಮನವಿಯನ್ನು ಸಲ್ಲಿಸಿ, ಗೌರವಪೂರ್ವಕವಾಗಿ ಸನ್ಮಾನಿಸಿದರು.
ದಾಂಡೇಲಿಯ ಉದ್ಯಮಿಗಳಾದ ವಿಜಯಕುಮಾರ್ ಶೆಟ್ಟಿ, ಎಸ್.ಪ್ರಕಾಶ್ ಶೆಟ್ಟಿ, ಸೋಹನ್ ಶೆಟ್ಟಿ ಮತ್ತು ವೀರೇಂದ್ರ ಶೆಟ್ಟಿಯವರ ನೇತೃತ್ವದ ನಿಯೋಗವು ಕೆ.ಜಯಪ್ರಕಾಶ್ ಹೆಗ್ಡೆಯವರನ್ನು ಭೇಟಿಯಾಗಿ ಕೆಲ ಹೊತ್ತು ಚರ್ಚೆ ನಡೆಸಿದರು.