ತುಮಕೂರು: ಪಾವಗಡ ಪೊಲೀಸ್ ಠಾಣೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಶನಿವಾರ ಸಂಜೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಠಾಣೆಯಲ್ಲಿನ ವಿಸಿಟರ್ ಪುಸ್ತಕವನ್ನು ತೆರೆದು ದೂರುದಾರನೊಬ್ಬನಿಗೆ ಕರೆ ಮಾಡಿದ್ದಾರೆ. ಆತ ನೀಡಿದ ದೂರಿಗೆ ಪೊಲೀಸರ ಸ್ಪಂದನೆಯ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಯ ಕಟ್ಟಡಗಳ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿದ್ದಾರೆ
ಪೊಲೀಸರು ಸಾರ್ವಜನಿಕರ ಸಮಸ್ಯೆಗೆ ಉತ್ತಮವಾಗಿ ಸ್ಪಂದಿಸಬೇಕು. ದೂರುದಾರರು ನೀಡಿದ ದೂರುಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿ ತೆರಳಿದ್ದಾರೆ.